ಟಾಟಾ ಮೋಟಾರ್ಸ್ ಕಂಪನಿಯು ಗುರುವಾರದಂದು ಎರಡು ಹೊಸ ನೆಕ್ಸಾನ್ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ವಾಹನಗಳಿಗೆ ಹೊಸ ರೂಪ, ನವೀಕರಣ ಮಾಡಲಾಗಿದೆ. 8.10 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಮ್) ಬೆಲೆ ಆರಂಭವಾಗಲಿದ್ದು, ಆಧುನಿಕ ವ್ಯವಸ್ಥೆಗಳನ್ನು ಈ ವಾಹನಗಳಲ್ಲಿ ನೀಡಲಾಗಿದೆ.
ಇದರ ಡ್ಯಾಶ್ ಬೋರ್ಡ್ ನಲ್ಲಿ 10.5 ಇಂಚು ಪರದೆಯ ಮಲ್ಟಿಮೀಡಿಯಾ ಸಿಸ್ಟಮ್ ಅಳವಡಿಸಲಾಗಿದ್ದು ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಕಾಲ್, ಮೆಸೇಜ್, ನ್ಯಾವಿಗೇಶನ್ ಮೊದಲಾದ ವ್ಯವಸ್ಥೆಗಳನ್ನು ಮತ್ತಷ್ಟು ಉತ್ತಮ ಪಡಿಸಲಾಗಿದೆ. ಅಲ್ಲದೆ 6 ಏರ್ ಬ್ಯಾಗ್ ಗಳು, ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಸುರಕ್ಷಿತ ವೈಶಿಷ್ಟ್ಯಗಳನ್ನು ಇದು ಹೊಂದಿದೆ.
ಇನ್ನು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ವೆಹಿಕಲ್ ಫೇಸ್ ಲಿಫ್ಟ್ ನ ಮಧ್ಯಮ ಶ್ರೇಣಿ ಮಾದರಿ ಒಮ್ಮೆ ಚಾರ್ಜ್ ಮಾಡಿದರೆ 325 ಕಿ.ಮೀ ಕ್ರಮಿಸಲಿದ್ದು, ನೆಕ್ಸಾನ್ ಎಲೆಕ್ಟ್ರಿಕ್ ವೆಹಿಕಲ್ ಲಾಂಗ್ ರೇಂಜ್ ಮಾದರಿಯು 465 ಕಿಲೋಮೀಟರ್ ವರೆಗೆ ಕ್ರಮಿಸಲಿದೆ. ಈಗ ಬಿಡುಗಡೆಗೊಂಡಿರುವ ವಾಹನಗಳು ಸವಾರರಿಗೆ ಉತ್ತಮ ಅನುಭವವನ್ನು ನೀಡಲಿವೆ ಎಂದು ಕಂಪನಿ ಹೇಳಿದೆ.