ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ನದ್ದೇ ದೊಡ್ಡ ಸಮಸ್ಯೆ. ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಸುಗಮವಾಗಿ ಸಂಚರಿಸಲು ದುಸ್ತರವಾಗಿದ್ದು, ಇದಕ್ಕೆ ಪರಿಹಾರ ರೂಪಿಸಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.
ಸಂಚಾರಿ ಪೊಲೀಸರು, ಅನಗತ್ಯವಾಗಿ ವಾಹನ ತಪಾಸಣೆ ನಡೆಸದಂತೆ ಜಂಟಿ ಪೊಲೀಸ್ ಆಯುಕ್ತ ಎಂ ಎನ್ ಅನುಚೇತ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಹೆಚ್ಚಿನ ಒತ್ತು ನೀಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕೆಲವು ಪಿಎಸ್ಐ ಹಾಗೂ ಎಎಸ್ಐ ಗಳು ಅನವಶ್ಯಕವಾಗಿ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿರುವ ಕುರಿತಂತೆ ಸಾರ್ವಜನಿಕರಿಂದ ದೂರು ಬಂದಿದ್ದರ ಜೊತೆಗೆ ಹಿರಿಯ ಅಧಿಕಾರಿಗಳೂ ಸಹ ಇದನ್ನು ಗಮನಿಸಿದ್ದರು. ಹೀಗಾಗಿ ಇದೀಗ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.