ಬೆಂಗಳೂರು : ‘ಮದ್ಯ’ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಚಿಲ್ಲರೆ ಬಿಯರ್ ಮಾರಾಟ ಮಳಿಗೆಗೆ ಲೈಸೆನ್ಸ್ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಹೌದು. ಸರ್ಕಾರದ ಆದಾಯವನ್ನು ಹೆಚ್ಚಿಸಲು ಚಿಲ್ಲರೆ ಮಾರಾಟದ ಡ್ರಾಫ್ಟ್ ಬಿಯರ್ ಔಟ್ ಲೆಟ್ ಗಳಿಗೆ ಹೊಸ “ಸ್ವತಂತ್ರ” ಅಥವಾ “ಸ್ಟ್ಯಾಂಡ್ ಅಲೋನ್” ಲೈಸೆನ್ಸ್ ನೀಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.
ಡ್ರಾಫ್ಟ್ ಬಿಯರ್ ಎಂದರೆ ದೊಡ್ಡ ಕೆಗ್ಗಳಲ್ಲಿ ಸಂಗ್ರಹಿಸಲಾದ ಬಿಯರ್ ಆಗಿದ್ದು, ಮತ್ತು ಟ್ಯಾಪ್ನಿಂದ ಗ್ಲಾಸ್ ಗೆ ಹಾಕಿ ನೀಡಲಾಗುತ್ತದೆ. ಬಾಟಲ್ ಬಿಯರ್ ಗೆ ಹೋಲಿಸಿದರೆ ಇದು ಬಹಳ ರುಚಿಯಾಗಿರುತ್ತದೆ ಎನ್ನಲಾಗಿದೆ.
ಶಿವಮೊಗ್ಗ, ತುಮಕೂರು ಮತ್ತು ವಿಜಯಪುರ. ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಂಗಳೂರು, ಬೆಳಗಾವಿ, ಬಳ್ಳಾರಿ, ಮೈಸೂರು, ಕಲಬುರಗಿ ಸೇರಿ ರಾಜ್ಯದ 11 ಈ ಮಳಿಗೆಗೆ ಪರವಾನಗಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.