ಬೆಂಗಳೂರು : (ಮಾಪ್ ಆಪ್ ಸುತ್ತು) ಭರ್ತಿಯಾಗದೇ ಉಳಿದಿರುವ 1200 ಕ್ಕೂ ವೈದ್ಯಕೀಯ ಸೀಟುಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಈಗಾಗಲೇ ಸೀಟು ಪಡೆದುಕೊಂಡಿರುವ ಅಭ್ಯರ್ಥಿಗಳು ಕೂಡ ಭಾಗಿಯಾಗಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಮಾಪ್ ಆಪ್ ಸುತ್ತು ನಿನ್ನೆ ಗುರುವಾರದಿಂದ ಆರಂಭಗೊಂಡಿದ್ದು, ಸೆ20 ರವರೆಗೆ ನಡೆಯಲಿದೆ.ಜಿ ಕೋಟಾದ 42 ಸೀಟುಗಳು ಮತ್ತು ಪಿ ಕೋಟಾದ 482 ಸೀಟುಗಳು ಖಾಲಿ ಉಳಿದಿರುವ ಹಿನ್ನೆಲೆ ಸೀಟು ಪಡೆದಿರುವವರೂ ಪಾಲ್ಗೊಳ್ಳಲು ಉತ್ತಮ ಅವಕಾಶ ನೀಡಲಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ಇನ್ನೂ ಉತ್ತಮ ಕಾಲೇಜು ಆಯ್ಕೆ ಮಾಡಲು ಅವಕಾಶ ನೀಡಿದಂತಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.
ಈ ಹಂತದಲ್ಲಿ ಸೀಟು ನಿಯೋಜನೆಯ ನಂತರ, ಅಭ್ಯರ್ಥಿಗಳು ತಮಗೆ ನಿಯೋಜಿಸಲಾದ ಕಾಲೇಜಿಗೆ ವರದಿ ಮಾಡಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ KEA ಅಧಿಕೃತ ವೆಬ್ಸೈಟ್ ಭೇಟಿ ನೀಡಬಹುದು.