alex Certify ಶಾಲೆಗೆ ಹೋಗೋ ವಯಸ್ಸಲ್ಲಿ ಫುಡ್​ಸ್ಟಾಲ್​ ತೆರೆದು ಸ್ವಂತ ಉದ್ಯಮ ಆರಂಭಿಸಿದ್ದಾರೆ ಈ ಪುಟ್ಟ ಪೋರರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಗೆ ಹೋಗೋ ವಯಸ್ಸಲ್ಲಿ ಫುಡ್​ಸ್ಟಾಲ್​ ತೆರೆದು ಸ್ವಂತ ಉದ್ಯಮ ಆರಂಭಿಸಿದ್ದಾರೆ ಈ ಪುಟ್ಟ ಪೋರರು…!

ಅಮೃತಸರ ನಗರದಲ್ಲಿ ಜೀವನೋಪಾಯಕ್ಕಾಗಿ ಇಬ್ಬರು ಯುವ ಸಹೋದರರು ಸಾಹಸವೊಂದಕ್ಕೆ ಇಳಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಈ ಮನಮಿಡಿಯುವ ವಿಡಿಯೋವೊಂದು ಹರಿದಾಡುತ್ತಿದೆ.

16 ಮತ್ತು 8 ವರ್ಷ ವಯಸ್ಸಿನ ಆ ಇಬ್ಬರು ಮಕ್ಕಳು ಫುಡ್ ಸ್ಟಾಲ್ ಒಂದನ್ನು ಪ್ರಾರಂಭಿಸುವ ಮೂಲಕ ಉದ್ಯಮಿಗಳಾಗುವ ಪ್ರಯಾಣವನ್ನು ಜೊತೆಯಾಗಿಯೆ ಆರಂಭಿಸಿದ್ದಾರೆ. ಈ ಸಾಹಸದ ಉದ್ಯಮವು ಇವರು ಕೇವಲ ಶಾಲೆ ಬಿಟ್ಟ ನಂತರ ಫ್ರೀ ಟೈಮ್‌ನಲ್ಲಿ ಮಾಡಿಕೊಂಡಿರುವ ಹವ್ಯಾಸವಲ್ಲ. ಬದಲಾಗಿ ಇದು ಅವರ ಜೀವನ ನಡೆಸಲು ಕಂಡುಕೊಂಡಿರುವ ದಾರಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ನ ಕ್ಯಾಪ್ಸನ್ ಪ್ರಕಾರ, ಈ ಧೈರ್ಯಶಾಲಿ ಹುಡುಗರು ಕಳೆದ ಹತ್ತು ದಿನಗಳಿಂದ ತಮ್ಮ ಫುಡ್ ಸ್ಟಾಲ್‌ನ್ನು ನಡೆಸುತ್ತಿದ್ದಾರೆ. ಪೂರ್ತಿ ಶ್ರದ್ಧೆಯಿಂದ ಅವರು ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಶಾಲೆ ಮುಗಿದ ಕೂಡಲೇ ಅಂದ್ರೆ ಸಂಜೆ 4 ಗಂಟೆಗೆ ತಮ್ಮ ಆಹಾರದ ಬಂಡಿಯನ್ನು ಓಪನ್ ಮಾಡುವ ಇವರು ರಾತ್ರಿ 11 ರವರೆಗೆ ತೆರೆದಿಡುತ್ತಾರೆ. ಅವರ ಈ ಅವಿರತ ಪ್ರಯತ್ನ, ಶ್ರಮವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ. ಜೊತೆಗೆ ಸ್ಥಳೀಯರು ಮಾಡಿರುವ ವೀಡಿಯೊ ವೈರಲ್ ಆಗುವ ಮೂಲಕ ನೆಟ್ಟಿಗರ ಗಮನವನ್ನು ಸೆಳೆದಿದೆ.

ಈ ಸಹೋದರರ ಕಥೆಯು ಅವರ ಜೀವನದ ಉದಾಹರಣೆ ಮಾತ್ರವಲ್ಲ, ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಅನೇಕರು ಕಷ್ಟಪಡುತ್ತಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಈ ರೀತಿಯ ಆರ್ಥಿಕ ಸಂಕಷ್ಟಗಳನ್ನು ಎದುರಿಸಲು ಈ ಮಕ್ಕಳು ಕೈಗೊಂಡಿರುವ ಕಾರ್ಯ ಹೆಚ್ಚಿನ ಜನರಿಗೆ ಸ್ಪೂರ್ತಿದಾಯಕವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...