ಉಡುಪಿ: ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 7 ಕೋಟಿ ರೂಪಾಯಿ ವಂಚಿಸಿದ್ದ ಆರೋಪದಲ್ಲಿ ಸಾಮಾಜಿಕ ಹೋರಾಟಗಾರ್ತಿ, ಹಿಂದೂ ನಾಯಕಿ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪಕ್ಕಾ ಸಿನಿಮಾ ಸ್ಟೈಲ್ ನಲ್ಲಿ ಚೈತ್ರಾ ಕುಂದಾಪುರ ಕಥೆ ಹೆಣೆದು, ನಕಲಿ ಕೇಂದ್ರ ನಾಯಕರನ್ನು ಸೃಷ್ಟಿ, ಟ್ರೇನಿಂಗ್ ಕೊಟ್ಟು ನಾಟಕವಾಡಿರುವುದು ಬಹಿರಂಗವಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡುವುದಾಗಿ ಹೇಳಿ 7 ಕೋಟಿ ರೂಪಾಯಿ ಹಣ ವಂಚಿಸಿದ್ದಾರೆ ಎಂದು ಉದ್ಯಮಿ ಗೋವಿಂದ ಬಾಬು ಆರೋಪಿಸಿದ್ದಾರೆ.
ತನಗೆ ಬಿಜೆಪಿಯ ಕೇಂದ್ರ ನಾಯಕರು ಹಾಗೂ ಆರ್.ಎಸ್.ಎಸ್ ವರಿಷ್ಠರು ಪರಿಚಯ ಎಂದು ಹಂತ ಹಂತವಾಗಿ 7 ಕೋಟಿ ರೂಪಾಯಿ ದೋಚಿದ್ದಾರೆ. ಉದ್ಯಮಿ ಗೋವಿಂದ ಬಾಬುರನ್ನು ವಂಚಿಸಲು ಚೈತ್ರಾ ಕುಂದಾಪುರ ವ್ಯವಸ್ಥಿತ ಪ್ಲಾನ್ ಮಾಡಿಕೊಂಡು ಮೋಸ ಮಾಡಿದ್ದಾರೆ. ನಕಲಿ ಕೇಂದ್ರ ನಾಯಕರನ್ನು ಸೃಷ್ಟಿಸಿ ಅವರಿಗೆ ತರಬೇತಿಯನ್ನು ನೀಡಿದ್ದರು.
ಕಡೂರಿನ ಸಲೂನ್ ಶಾಪ್ ಮೇಕಪ್ ಮಾಡುವ ರಮೇಶ್ ಹಾಗೂ ಧನರಾಜ್ ಎಂಬುವವರು ಆರ್.ಎಸ್.ಎಸ್ ಪ್ರಚಾರಕರನ್ನಾಗಿ ಮಾಡಿ ಕೆ.ಆರ್ ಪುರಂ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ನಾಯಕ್ ಎಂಬಾತನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಉದ್ಯಮಿಗೆ ಪರಿಚಯಿಸಿದ್ದರು.
ಅಲ್ಲದೇ ಕಡೂರು ಮನೆಯಲ್ಲಿ ಈ ನಕಲಿ ಪಾತ್ರಧಾರಿಗಳಿಗೆ ಚೈತ್ರಾ ಕುಂದಾಪುರ ತರಬೇತಿ ನೀಡಿರೋದು ತಿಳಿದುಬಂದಿದೆ. ಬಳಿಕ ಆರ್.ಎಸ್.ಎಸ್ ಸಂಘಟನೆ ಹೆಸರಿನ ಕಾರ್ ಬಳಕೆಗೆ 2 ಲಕ್ಷ ರೂಪಾಯಿ ಸಹ ನೀಡಲಾಗಿತ್ತು. ರಸ್ತೆ ಬದಿ ಕಬಾಬ್ ಮಾರುತ್ತಿದ್ದ ನಾಯಕ್ ಎಂಬಾತನಿಗೆ ಚೈತ್ರಾ ಹಾಗೂ ಗಗನ್ ಎಂಬುವವರು 93 ಸಾವಿರ ನೀಡಿದ್ದರು.
ಇತ್ತ ಗಗನ್ ಮತ್ತು ಧನರಾಜ್ ಈ ನಾಟಕಕ್ಕಾಗಿ ತಲಾ 1.20 ಲಕ್ಷ ಹಣ ಪಡೆದಿದ್ದರಂತೆ. ರಮೇಶ್ ಎಂಬಾತನಿಗೆ ಆರ್.ಎಸ್.ಎಸ್ ಪ್ರಚಾರಕ ವಿಶ್ವನಾಥ್ ಜೀ ಹೆಸರಿನ ಪಾತ್ರ ನೀಡಲಾಗಿತ್ತು. ಟಿಕೆಟ್ ತಪ್ಪಿದಾಗ ಹಣವನ್ನು ವಿಶ್ವನಾಥ್ ಜೀಗೆ ತಲುಪಿಸಿದ್ದಾಗಿ ಹೇಳಿದ್ದ ಚೈತ್ರಾ ಕುಂದಾಪುರ ತಾನೂ ಮೋಸ ಹೋಗಿದ್ದೇನೆ ಎಂದು ನಾಟಕವಾಡಿರುವುದು ಎಂದು ತಿಳಿದುಬಂದಿದೆ.
ಚೈತ್ರಾ ಕುಂದಾಪುರ,ವಂಚನೆ ಪ್ರಕರಣ,ಡ್ರಾಮ,ನಕಲಿ ಬಿಜೆಪಿ ನಾಯಕರು,Chaitra kundapura,cheating case,Drama,fake bjp leaders