ಬೆಂಗಳೂರು : ಗೌರಿ-ಗಣೇಶ ಹಬ್ಬಕ್ಕೆ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಹೆಸರು, ಉದ್ದು, ಕಡಲೆ, ಗೋಧಿ, ಅಕ್ಕಿ ಸೇರಿದಂತೆ ಹಲವು ಆಹಾರ ಧಾನ್ಯಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಮುಂಗಾರು ಮಳೆ ಕೊರತೆಯಿಂದಾಗಿ ಕೃಷಿ ಬೆಳೆಗಳಿಗೆ ಸಂಕಷ್ಟ ಎದುರಾಗಿದ್ದು, ಆಹಾರ ಧಾನ್ಯಗಳ ಬೆಲೆ ಶೇ. 20-30 ರಷ್ಟು ಏರಿಕೆಯಾಗಿದೆ. ತೊಗರಿ ಬೇಳೆ ಕೆಜಿಗೆ 200 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಕ್ಕಿ, ಗೋಧಿ ಹಾಗೂ ಬೇಳೆಕಾಳುಗಳು ಶೇ. 20-25 ರಷ್ಟು ಏರಿಕೆಯಾಗಿದೆ. ಮಳೆ ಕೊರತೆಯಿಂದಾಗಿ ಬೆಳೆ ಇಲ್ಲ. ಹೀಗಾಗಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿ ಬೆಲೆಗಳು ಏರಿಕೆಯಾಗಿವೆ.
ಇಲ್ಲಿದೆ ಆಹಾರ ಧಾನ್ಯಗಳ ಬೆಲೆಗಳು
ಹೆಸರು ಕಾಳು-120 ರೂ.ನಿಂದ 150 ರೂ.
ತೊಗರಿ-160 ರೂ.ನಿಂದ 170 ರೂ
ಹೆಸರು ಬೇಳೆ-120 ರೂ.ನಿಂದ 150 ರೂ.
ಕಡಲೆಕಾಳು – 80 ರೂ.ನಿಂದ 85 ರೂ.
ಕಾಬೂಲ್ ಚನ್ನಾ -160 ರ.ನಿಂದ 170 ರೂ.
ಬೇಳೆ- 70 ರೂ.ನಿಂದ 80 ರೂ.ವರೆಗೆ ಏರಿಕೆಯಾಗಿದೆ.