alex Certify ಕನ್ನಡ ಭಾಷೆಗೆ ಮಿತಿ ಇದೆ: ಲೇಖಕ ರೋಹಿತ್ ಚಕ್ರತೀರ್ಥ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡ ಭಾಷೆಗೆ ಮಿತಿ ಇದೆ: ಲೇಖಕ ರೋಹಿತ್ ಚಕ್ರತೀರ್ಥ ಹೇಳಿಕೆ

ಉಡುಪಿ: ಕನ್ನಡಕ್ಕಿಂತ ಪ್ರಾಚೀನವಾದ ಭಾಷೆ ಬೇರೊಂದಿಲ್ಲ. ಬರೆಯುವ ಅನುಕೂಲ ಕನ್ನಡಕ್ಕೆ ಹೊರತಾಗಿ ಯಾವ ಭಾಷೆಗೂ ಇಲ್ಲ. ಜಗತ್ತಿನಲ್ಲಿಯೇ ಪ್ರಾಚೀನ ಭಾಷೆ ಕನ್ನಡ…ಇಂತಹ ಹೊಸ ಸಿದ್ಧಾಂತಗಳು ಸಂಘರ್ಷ ಸೃಷ್ಟಿಸುತ್ತಿವೆ ಎಂದು ಲೇಖಕ ರೋಹಿತ್ ಚಕ್ರತೀರ್ಥ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯ ಅದಮಾರು ಮಠದ ವತಿಯಿಂದ ಪೂರ್ಣಪ್ರಜ್ಞಾ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ ವಿಶ್ವಾರ್ಪಣಂ’ ಕಾರ್ಯಕ್ರಮದಲ್ಲಿ ’ಸೃಜನಾತ್ಮಕ ಭಾರತೀಯ ಅಸ್ಮಿತೆ ಮತ್ತು ಮಣಿಪುರದ ವಿದ್ಯಮಾನಗಳು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರೋಹಿತ್ ಚಕ್ರತೀರ್ಥ, ಕನ್ನಡ ಭಾಷೆಗೆ ಪ್ರಾಚೀತ ಇತಿಹಾಸ ಹಾಗೂ ಲಿಪಿ ಇದೆ ಶಾಸ್ತ್ರ, ಗ್ರಂಥ, ಮಹಾಕಾವ್ಯಗಳು ಕನ್ನಡದಲ್ಲಿ ರಚನೆಯಾಗಿವೆ ಎಂಬುದನ್ನೆಲ್ಲ ಒಪ್ಪಿಕೊಳ್ಳಬಹುದು. ಆದಾಗ್ಯೂ ಕನ್ನಡ ಭಾಷೆಗೆ ಮಿತಿ ಇದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.

ಹೇಳಿದ್ದೆಲ್ಲವನ್ನೂ ಕನ್ನಡದಲ್ಲಿ ಬರೆಯಬಹುದು ಎಂದು ಕೆಲವರು ವಾದಿಸುತ್ತಾರೆ ಆದರೆ ಬಹಳಷ್ಟು ತುಳು, ಇಂಗ್ಲೀಷ್ ಪದಗಳನ್ನು ಕನ್ನಡ ಭಾಷೆಯಲ್ಲಿ ಅದೇ ಸ್ವರ ಬರುವಂತೆ ಬರೆಯಲು ಸಾಧ್ಯವಿದೆಯೇ ಎಂದು ರೋಹಿತ್ ಚಕ್ರತೀರ್ಥ ಪ್ರಶ್ನಿಸಿದ್ದಾರೆ.

50 ವರ್ಷಗಳ ಹಿಂದೆ ನಾನೊಬ್ಬ ಸನಾತನಿ, ಹಿಂದೂ ಎಂದು ಹೆಮ್ಮೆ ಹಾಗೂ ಪ್ರೀತಿಯಿಂದ ಹೇಳಿಕೊಳ್ಳುವ ವಾತಾವರಣವಿತ್ತು. ಪ್ರಸ್ತುತ ಹಿಂದೂ, ಸನಾತನಿ, ಭಾರತೀಯ ಎಂದು ಹೇಳಿಕೊಂಡರೆ ಜಗಳಕ್ಕಿಳಿಯುತ್ತಿದ್ದಾರೆ. ಅಸ್ಮಿತೆಯ ವಿಚಾರಗಳು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿವೆ ಎಂದು ಹೇಳಿದರು.

ಬ್ರಾಹ್ಮಣ, ಅಬ್ರಾಹ್ಮಣ, ಕನ್ನಡ ಹಾಗೂ ಇತರೆ ಭಾಷೆಗಳ ಮಧ್ಯೆ ಸಂಘರ್ಷಗಳು ನಡೆಯುತ್ತಿದ್ದು, ಇದರ ಹಿಂದೆ ಹುನ್ನಾರ ಇದೆಯೇ? ಸಂಘರ್ಷ ಹುಟ್ಟುಹಾಕಲೆಂದೇ ಅಸ್ಮಿತೆಯ ಪ್ರಶ್ನೆಯನ್ನು ಮುನ್ನೆಲೆಗೆ ತರಲಾಗುತ್ತಿದೆಯೇ? ಇಷ್ಟು ದಿನ ಸಮಸ್ಯೆಯಾಗದ ಅಸ್ಮಿತೆ ಪ್ರಸ್ತುತ ಸಮಸ್ಯೆಯಾಗಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

400ರಿಂದ 500 ವರ್ಷಗಳ ಹಿಂದೆ ರಾಜರ ಕಾಲದಲ್ಲಿ ಎರಡ್ಮೂರು ಭಾಷೆಗಳಲ್ಲಿ ಸಂವಹನ, ವ್ಯವಹಾರ ನಡೆಯುತ್ತಿತ್ತು. ವಿಜಯನಗರ ಕಾಲದಲ್ಲಿ ಕನ್ನಡ, ಸಂಸ್ಕೃತ, ತೆಲುಗು ಭಾಷೆಗಳ ಬಳಕೆ ಇತ್ತು. ಭಾಷಾ ಸಂಘರ್ಷಗಳು ಇರಲಿಲ್ಲ. ಪ್ರಸ್ತುತ ವಿಧಾನಸೌಧದಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಕನ್ನಡ ಹೊರತಾಗಿ ಮತ್ತೊಂದು ಭಾಷೆಯ ಬಳಕೆ ಸಾಧ್ಯವಿಲ್ಲದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...