ಸಿಐಡಿ ಪೊಲೀಸರು ಬೆಳ್ಳಂ ಬೆಳಗ್ಗೆ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡುರನ್ನು ಬಂಧಿಸಿದ್ದು, ಬಂಧನದ ವೇಳೆ ಭಾರಿ ಹೈಡ್ರಾಮಾ ನಡೆದಿದೆ. ಮಧ್ಯರಾತ್ರಿ 12 ಗಂಟೆಗೆ ಚಂದ್ರಬಾಬು ಬಂಧಿಸಲು ಪೊಲೀಸರು ಹೋಗಿದ್ದು, ಭಾರಿ ಹೈಡ್ರಾಮಾ ನಡೆದ ನಂತರ ಬೆಳಗ್ಗೆ 6 ಗಂಟೆಗೆ ಬಂಧಿಸಿದ್ದಾರೆ.
ಬಂಧನದ ವೇಳೆ ವಾಗ್ಧಾಳಿ ನಡೆಸಿ ಚಂದ್ರಬಾಬು ನಾಯ್ಡು ‘ ಸಿಐಡಿ ಪೊಲೀಸರು ನನ್ನ ಹಕ್ಕನ್ನು ಕಸಿಯುವ ಕೆಲಸ ಮಾಡಿದ್ದಾರೆ.ಎಫ್ ಐ ಆರ್ ಮಾಡಿಲ್ಲ, ಯಾವುದೇ ನೋಟಿಸ್ ನೀಡಿಲ್ಲ. ಯಾಕೆ ನನ್ನನ್ನು ಬಂಧಿಸುತ್ತೀರಾ..? ಎಂದು ವಾಗ್ಧಾಳಿ ನಡೆಸಿದರು.
ಆಂಧ್ರದ ನಂದ್ಯಾಲದ ಫಂಕ್ಷನ್ ಹಾಲ್ ನಲ್ಲಿ ತಂಗಿದ್ದ ಚಂದ್ರಬಾಬು ನಾಯ್ಡು ಬಂಧನದ ವೇಳೆ ಭಾರಿ ಹೈಡ್ರಾಮಾ ನಡೆದಿದ್ದು, ಚಂದ್ರಬಾಬು ನಾಯ್ಡುರನ್ನು ಬಂಧಿಸಲು ಸಿಐಡಿ ಪೊಲೀಸರು ಬರುತ್ತಿದ್ದಂತೆ ಟಿಡಿಪಿ ಕಾರ್ಯಕರ್ತರು ಪೊಲೀಸರನ್ನು ಸುತ್ತುವರೆದು ಬಂಧಿಸದಂತೆ ತಡೆದಿದ್ದಾರೆ. ನಂತರ ಸಿಐಡಿ ಅಧಿಕಾರಿಗಳು ನಾಯ್ಡು ಉಳಿದುಕೊಂಡಿದ್ದ ಕೊಠಡಿಯೊಳಗೆ ನುಗ್ಗಿ ಚಂದ್ರಬಾಬುರನ್ನು ಬಂಧಿಸಿದ್ದಾರೆ.
ಸ್ಕಿಲ್ ಹಗರಣ ಸಂಬಂಧ ಹೈಕೋರ್ಟ್ ಸೂಚನೆ ಮೇರೆಗೆ ಸಿಐಡಿ ಪೊಲೀಸರು ಚಂದ್ರಬಾಬು ನಾಯ್ಡುರನ್ನು ಬಂಧಿಸಿದ್ದಾರೆ. ಸಾರ್ವಜನಿಕ ಹಣವನ್ನು ಲೂಟಿ ಮಾಡಿದ ಆರೋಪದ ಮೇಲೆ ಎನ್.ಚಂದ್ರಬಾಬು ನಾಯ್ಡು ಅವರನ್ನು ಬಂಧಿಸುವಂತೆ ಆಗ್ರಹಿಸಲಾಗಿತ್ತು.