ಶಿವಮೊಗ್ಗ: ಡಿಎಲ್ ಇಲ್ಲದೆ ಪುತ್ರ ಬೈಕ್ ಓಡಿಸಿದ್ದ ಹಿನ್ನೆಲೆಯಲ್ಲಿ ಆತನ ತಂದೆಗೆ ಶಿವಮೊಗ್ಗದ ಜೆ.ಎಂ.ಎಫ್.ಸಿ. ನ್ಯಾಯಾಲಯ 25,000 ರೂ. ದಂಡ ವಿಧಿಸಿದೆ.
ಶಿವಮೊಗ್ಗ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಅವರು ಆಗಸ್ಟ್ 12ರಂದು ಶಿವಮೊಗ್ಗ ನಗರದ ಅಶೋಕ ಹೋಟೆಲ್ ಬಳಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ ಓಂಪ್ರಕಾಶ್(47) ಅವರ ಪುತ್ರ 17 ವರ್ಷದ ಬಾಲಕ ಚಾಲನಾ ಪರವಾನಿಗೆ ಇಲ್ಲದೆ ಓಡಿಸಿದ್ದಾನೆ.
ಪರಿಶೀಲನೆ ವೇಳೆ ಡಿಎಲ್ ಇಲ್ಲದೆ ಬೈಕ್ ಚಾಲನೆ ಮಾಡಿ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಲೈಸೆನ್ಸ್ ಇಲ್ಲದಿದ್ದರೂ ಪುತ್ರನಿಗೆ ಬೈಕ್ ಚಾಲನೆ ಮಾಡಲು ಕೊಟ್ಟಿದ್ದಕ್ಕೆ ಆತನ ಓಂಪ್ರಕಾಶ್ ವಿರುದ್ಧ ಪೊಲೀಸರು ಲಘು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಎಇಎಲ್ ಇಲ್ಲದೇ ಬೈಕ್ ಚಾಲನೆ ಮಾಡಿದ ಬಾಲಕನ ತಂದೆ ಓಂ ಪ್ರಕಾಶ್ ಅವರಿಗೆ ಶಿವಮೊಗ್ಗ ಜೆ.ಎಂ.ಎಫ್.ಸಿ. ನ್ಯಾಯಾಲಯ 25,000 ರೂ. ದಂಡ ವಿಧಿಸಿದೆ.