Viral Video | ನೀರಜ್​ ಚೋಪ್ರಾ ಪ್ರತಿಮೆಯಲ್ಲಿದ್ದ ಜಾವೆಲಿನ್ ಅನ್ನೇ ಎಗರಿಸಿದ ಖದೀಮರು

ಭಾರತದ ಚಿನ್ನದ ಹುಡುಗ ನೀರಜ್​ ಚೋಪ್ರಾರಿಗೆ ಗೌರವಾರ್ಥವಾಗಿ ನಿರ್ಮಿಸಲಾಗಿದ್ದ ಪ್ರತಿಮೆಯ ಕೈಯಲ್ಲಿದ್ದ ಜಾವೆಲಿನ್​​ನ್ನೇ ಯಾರೋ ಕಳ್ಳತನ ಮಾಡಿರುವ ಘಟನೆಯೊಂದು ಮೀರತ್​ನಲ್ಲಿ ಸಂಭವಿಸಿದೆ. ಹಾಪುರ್ ಬೇಸ್​ನಲ್ಲಿ ಸ್ಪೋರ್ಟ್ಸ್​​ ಸಿಟಿ ಪ್ರಮೋಷನ್​ನಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಇದೀಗ ಈ ಪ್ರತಿಮೆಯ ಕೈಯಲ್ಲಿ ಜಾವೆಲಿನ್​ ಮಾಯವಾಗಿದೆ.

ಮಾರುಕಟ್ಟೆ ಹೃದಯಭಾಗದಲ್ಲಿಯೇ ಈ ಪ್ರತಿಮೆಯಿದ್ದು ರಾತ್ರಿ ವೇಳೆಯಲ್ಲಿ ಯಾರೋ ಖದೀಮರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಒಲಂಪಿಕ್​ನಲ್ಲಿ ಟ್ರ್ಯಾಕ್​ & ಫೀಲ್ಡ್​ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಮೊದಲ ಆಟಗಾರ ಎಂಬ ಕೀರ್ತಿಗೆ ನೀರಜ್​ ಚೋಪ್ರಾ ಪಾತ್ರರಾಗಿದ್ದಾರೆ. ಇದರ ಗೌರವಾರ್ಥವಾಗಿ ಚಿನ್ನದ ಬಣ್ಣದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು.

ಒಂದು ಅಂತಸ್ತಿನ ಮನೆಯಷ್ಟು ಎತ್ತರದ ಪ್ರತಿಮೆ ಇದಾಗಿದ್ದು ಇಷ್ಟು ಎತ್ತರದ ಪ್ರತಿಮೆಯಿಂದ ಜಾವೆಲಿನ್​ ಯಾರು ಕದ್ದಿರಬಹುದು ಅಂತಾ ಪೊಲೀಸರು ಹಾಗೂ ಸ್ಥಳೀಯರು ತಲೆಕೆಡಿಸಿಕೊಂಡಿದ್ದಾರೆ. ಅಚ್ಚರಿ ಅಂದರೆ ಪ್ರತಿಮೆಯ ಹಿಂದೆಯೇ ಸಿಸಿ ಕ್ಯಾಮರಾ ಇದ್ದು ದುಷ್ಕರ್ಮಿಗಳು ಸಿಸಿ ಕ್ಯಾಮರಾ ಕಣ್ತಪ್ಪಿಸಿ ಜಾವೆಲಿನ್​ ಕದಿಯೋಕೆ ಸಾಧ್ಯವೇ ಇಲ್ಲ. ಆದರೂ ಈ ಜಾವೆಲಿನ್​ ಎಲ್ಲಿ ಮಾಯವಾಯ್ತು ಎಂಬ ಕುತೂಹಲ ಹೆಚ್ಚಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

https://twitter.com/i/status/1698944204708483212

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read