ಮುಂಬೈ: ‘ಇಂಡಿಯಾ’ ಹೆಸರಿನ ಬದಲಿಗೆ ‘ಭಾರತ್’ ಅನ್ನು ಬಳಸುವ ಬಗ್ಗೆ ನಡೆಯುತ್ತಿರುವ ವಿವಾದದ ಮಧ್ಯೆ, ಲೆಜೆಂಡರಿ ನಟ ಅಮಿತಾಬ್ ಬಚ್ಚನ್ ಅವರ ಇತ್ತೀಚಿನ ಟ್ವೀಟ್ ಎಲ್ಲಾ ಅಭಿಮಾನಿಗಳ ಗಮನ ಸೆಳೆದಿದೆ.
ಮಂಗಳವಾರ, ಎಕ್ಸ್ ನಲ್ಲಿ ಅಮಿತಾಭ್ ಹಿಂದಿಯಲ್ಲಿ “ಭಾರತ್ ಮಾತಾ ಕಿ ಜೈ” ಎಂದು ಬರೆದುಕೊಂಡಿದ್ದಾರೆ.
ದೇಶದ ಹೆಸರು ಮರು ನಾಮಕರಣ ಮಾಡುವ ವಿವಾದದ ಸಮಯದಲ್ಲಿ ಅಮಿತಾಭ್ ಟ್ವೀಟ್ ಮಾಡಿರುವುದರಿಂದ ಬಿಗ್ ಬಿ ಭಾರತದ ಹೆಸರು ಬದಲಾವಣೆಯ ಪರವಾಗಿ ತಮ್ಮ ಬೆಂಬಲವನ್ನು ಪ್ರದರ್ಶಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ . ಅಮಿತಾಭ್ ಟ್ವೀಟ್ ಹಂಚಿಕೊಂಡ ಕೂಡಲೇ, ಹಲವಾರು ಅಭಿಮಾನಿಗಳು ನಟನ ಬೆಂಬಲವನ್ನು ಶ್ಲಾಘಿಸಿದ್ದಾರೆ.