ಬೆಂಗಳೂರು : ರಾಜಪ್ಪ ಮೇಷ್ಟ್ರು ಇಲ್ಲದಿದ್ದರೆ ನಾನು ಓದುತ್ತಿರಲಿಲ್ಲ, ಸಿಎಂ ಆಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಕರ ದಿನಾಚರಣೆಯಲ್ಲಿ ತಮ್ಮ ಶಿಕ್ಷಕರನ್ನು ನೆನೆಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಶಿಕ್ಷಕಕರ ದಿನಾಚರಣೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಿಕ್ಷಕರು ಜೀವನದಲ್ಲಿ ಪ್ರಮುಖ ಮಹತ್ವದವನ್ನು ವಹಿಸುತ್ತಾರೆ. ನನಗೆ ರಾಜಪ್ಪ ಮೇಷ್ಟ್ರು ಇಲ್ಲದಿದ್ದರೆ ನಿಮ್ಮ ಮುಂದೆ ಭಾಷಣ ಮಾಡುತ್ತಿರಲಿಲ್ಲ. ನನ್ನನ್ನು 5ನೇ ತರಗತಿಗೆ ಸೇರಿಸಿಕೊಂಡಿದ್ದರು. ಡ್ರಾಪ್ ಔಟ್ ಆಗಿದ್ದ ನನ್ನನ್ನು 5 ನೇ ತರಗತಿಗೆ ಸೇರಿಸಿಕೊಂಡು ಶಿಕ್ಷಣ ಕೊಟ್ಟರು ಎಂದರು.
ನಂಜೇಗೌಡ ಮೇಸ್ಟ್ರು ಮರಳಲ್ಲಿ ಅಕ್ಷರಾಭ್ಯಾಸ ಮಾಡಿಸದೆ ಇದ್ದಿದ್ದರೆ. ರಾಜಪ್ಪ ಮೇಸ್ಟ್ರು ನನ್ನನ್ನು ಗುರುತಿಸಿ ಶಾಲೆಗೆ ಸೇರಿಸದೆ ಇದ್ದಿದ್ದರೆ. ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಶಿಕ್ಷಕರ ದಿನದ ಈ ಸಂದರ್ಭದಲ್ಲಿ ಅಕ್ಷರ, ಜ್ಞಾನ, ಬದುಕು ಕಲಿಸಿದ, ಕಲಿಸುತ್ತಿರುವ ಗುರುಗಳನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿದ್ದೇನೆ ಎಂದಿದ್ದಾರೆ.