HomeLatest NewsSHOCKING: ಪಂದ್ಯದ ವೇಳೆ ಎದುರಾಳಿ ಹೊಡೆತಕ್ಕೆ ಕಿಡ್ನಿ ಕಳೆದುಕೊಂಡ ಬಾಸ್ಕೆಟ್ ಬಾಲ್ ಆಟಗಾರ

SHOCKING: ಪಂದ್ಯದ ವೇಳೆ ಎದುರಾಳಿ ಹೊಡೆತಕ್ಕೆ ಕಿಡ್ನಿ ಕಳೆದುಕೊಂಡ ಬಾಸ್ಕೆಟ್ ಬಾಲ್ ಆಟಗಾರ

ಮನಿಲಾ(ಫಿಲಿಪೈನ್ಸ್): ಬಾಸ್ಕೆಟ್ ಬಾಲ್ ವಿಶ್ವಕಪ್ ಪಂದ್ಯದ ವೇಳೆ ಎದುರಾಳಿ ಆಟಗಾರನ ಹೊಡೆತದಿಂದ ಗಾಯಗೊಂಡ ಬಾಸ್ಕೆಟ್ ಬಾಲ್ ಆಟಗಾರ ಕಿಡ್ನಿಯನ್ನೇ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ.

ಭಾನುವಾರ ದಕ್ಷಿಣ ಸುಡಾನ್ ಮತ್ತು ಸರ್ಬಿಯಾ ತಂಡಗಳ ನಡುವೆ ಪಂದ್ಯ ನಡೆಯುವಾಗ ಘಟನೆ ನಡೆದಿದೆ. ಪಂದ್ಯ ಮುಗಿಯಲು ಎರಡು ನಿಮಿಷ ಇರುವಾಗ ಸರ್ಬಿಯಾದ ಬೋರಿಸಾ ಸಿಮಾನಿಕ್ ಅವರ ಹೊಟ್ಟೆಯ ಕೆಳ ಭಾಗಕ್ಕೆ ಸುಡಾನ್ ನ ನುನಿ ಒಮೊಟ್ ಅವರ ಕೈ ಬಲವಾಗಿ ತಾಗಿದೆ. ಈ ವೇಳೆ ನೋವಿನಿಂದ ಚೀರಾಡಿದ ಸಿಮಾನಿಕ್ ಅಸ್ವಸ್ಥಗೊಂಡಿದ್ದು, ಅವರು ನೋವಿನಿಂದ ಕೋರ್ಟ್ ನಲ್ಲೇ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರೀಕ್ಷಿಸಿದ ವೈದ್ಯರು ಒಂದು ಕಿಡ್ನಿ ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದಾರೆ. ನಂತರ ಶಸ್ತ್ರ ಚಿಕಿತ್ಸೆ ನಡೆಸಿ ಒಂದು ಕಿಡ್ನಿ ಹೊರತೆಗೆಯಲಾಗಿದೆ. ಸರ್ಬಿಯಾದ ಬಾಸ್ಕೆಟ್‌ಬಾಲ್ ಆಟಗಾರ ಬೋರಿಸಾ ಸಿಮಾನಿಕ್ ಅವರು FIBA ವಿಶ್ವಕಪ್‌ನಲ್ಲಿ ಗಾಯಗೊಂಡ ನಂತರ ಮೂತ್ರಪಿಂಡ ಕಳೆದುಕೊಂಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular