ವಿಕ್ರಮ್ ಲ್ಯಾಂಡರ್ ಇಂದು ಯಶಸ್ವಿಯಾಗಿ ನಿದ್ದೆಗೆ ಜಾರಿದ್ದು, ಸೆ.22ರಿಂದ ಮತ್ತೆ ಆ್ಯಕ್ಟಿವ್ ಆಗಲಿದೆ.
ಈ ಬಗ್ಗೆ ಇಸ್ರೋ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ವಿಕ್ರಮ್ ಲ್ಯಾಂಡರ್ ಇಂದು ಭಾರತೀಯ ಕಾಲಮಾನ 08:00 ಗಂಟೆ ಸುಮಾರಿಗೆ ಸ್ಲೀಪ್ ಮೋಡ್ ಗೆ ಸಜ್ಜಾಗಿದೆ.
ಅದಕ್ಕೂ ಮೊದಲು, ಚಾಸ್ಟೆ, ರಂಭಾ-ಎಲ್ಪಿ ಮತ್ತು ಐಎಲ್ಎಸ್ಎ ಪೇಲೋಡ್ ಗಳ ಆಂತರಿಕ ಪ್ರಯೋಗಗಳನ್ನು ಹೊಸ ಸ್ಥಳದಲ್ಲಿ ನಡೆಸಲಾಗುತ್ತದೆ. ಸಂಗ್ರಹಿಸಿದ ಡೇಟಾವನ್ನು ಭೂಮಿಯಲ್ಲಿ ಸ್ವೀಕರಿಸಲಾಗುತ್ತದೆ.
ಪೇಲೋಡ್ ಗಳನ್ನು ಈಗ ಸ್ವಿಚ್ ಆಫ್ ಮಾಡಲಾಗಿದೆ. ಲ್ಯಾಂಡರ್ ರಿಸೀವರ್ ಗಳನ್ನು ಆನ್ ಮಾಡಲಾಗಿದೆ. ಸೌರಶಕ್ತಿ ಖಾಲಿಯಾದ ನಂತರ ಮತ್ತು ಬ್ಯಾಟರಿ ಖಾಲಿಯಾದ ನಂತರ ವಿಕ್ರಮ್ ಪ್ರಜ್ಞಾನ್ ಪಕ್ಕದಲ್ಲಿ ನಿದ್ರೆಗೆ ಜಾರುತ್ತಾನೆ. ಸೆಪ್ಟೆಂಬರ್ 22, 2023 ರಂದು ಮತ್ತೆ ಸಕ್ರಿಯನಾಗುತ್ತಾನೆ ಎಂದು ಇಸ್ರೋ ಟ್ವೀಟ್ ಮಾಡಿದೆ.
ಇದಕ್ಕೂ ಮೊದಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಕ್ರಮ್ ಲ್ಯಾಂಡರ್ ತನ್ನ ಎಂಜಿನ್ ಗಳನ್ನು ಮತ್ತೆ ಉರಿಸಲು ಆದೇಶಿಸಿತ್ತು. ಸುಮಾರು 40 ಸೆಂ.ಮೀ ಎತ್ತರದಲ್ಲಿ, 30 – 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯುವಂತೆ ಮಾಡಿದೆ.