HomeEntertainmentನಟಿ 'ರಶ್ಮಿಕಾ ಮಂದಣ್ಣ' ಕಾಲಿಗೆ ಬಿದ್ದ ನವಜೋಡಿ : ಮತ್ತೆ ಟ್ರೋಲ್ ಆದ್ರಾ 'ನ್ಯಾಷನಲ್ ಕ್ರಷ್'...?

ನಟಿ ‘ರಶ್ಮಿಕಾ ಮಂದಣ್ಣ’ ಕಾಲಿಗೆ ಬಿದ್ದ ನವಜೋಡಿ : ಮತ್ತೆ ಟ್ರೋಲ್ ಆದ್ರಾ ‘ನ್ಯಾಷನಲ್ ಕ್ರಷ್’…?

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಹೈದರಾಬಾದ್ ನಲ್ಲಿ ಇತ್ತೀಚೆಗೆ ನಡೆದ ಮದುವೆಗೆ ಅವರು ಹೋಗಿದ್ದು, ಈ ಕಾರ್ಯಕ್ರಮದ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿವೆ.

ಯೆಸ್, ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದ್ದಂತೆ ರಶ್ಮಿಕಾ ಟ್ರೋಲ್  ಆಗಿದ್ದಾರೆ.ಹೌದು, ರಶ್ಮಿಕಾ ತಮ್ಮ ಸಹಾಯಕ ಸಾಯಿ ಅವರ ಮದುವೆಯಲ್ಲಿ ಭಾಗವಹಿಸಿದ್ದರು, ಕಿತ್ತಳೆ ಬಣ್ಣದ ಸೀರೆಯಲ್ಲಿ ತನ್ನನ್ನು ರಶ್ಮಿಕಾ ಸಖತ್ ಮಿಂಚುತ್ತಿದ್ದರು.

ಈ ವೇಳೆ ನವಜೋಡಿಗಳು ರಶ್ಮಿಕಾ ಮಂದಣ್ಣ ಕಾಲಿಗೆ ಬಿದ್ದಿದ್ದು, ಈ ವಿಚಾರ ಇದೀಗ ಟ್ರೋಲಿಗರ ಆಹಾರಕ್ಕೆ ಕಾರಣವಾಗಿದೆ. ನವವಿವಾಹಿತರು ರಶ್ಮಿಕಾ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಾಗ ಈ ಮದುವೆಗೆ ಒಂದು ತಮಾಷೆಯ ಟ್ವಿಸ್ಟ್ ಸಿಕ್ಕಿತು. ಈ ಅನಿರೀಕ್ಷಿತ ಗೌರವದ ಕ್ರಿಯೆಯಿಂದ ಮುಳುಗಿಹೋದ ರಶ್ಮಿಕಾಗೆ ಮುಜುಗರವಾಯಿತು ಮತ್ತು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿರಲಿಲ್ಲ. ಸದ್ಯ ರಶ್ಮಿಕಾ ‘ಪುಷ್ಪ 2’ ಮತ್ತು ‘ಅನಿಮಲ್’ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular