ಬೆಂಗಳೂರು : ಬೆಂಗಳೂರು ಜನತೆಗೆ ಕರೆಂಟ್ ಶಾಕ್ ಎದುರಾಗಿದ್ದು, ಮತ್ತೆ ಬೆಸ್ಕಾಂ ವಿದ್ಯುತ್ ದರ ಹೆಚ್ಚಳ ಮಾಡಲಿದೆ ಎಂದು ಹೇಳಲಾಗಿದೆ.
ಹೌದು. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (BESCOM) ಗ್ರಾಹಕರಿಗೆ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ಹೆಸರಿನಲ್ಲಿ ಮತ್ತೊಂದು ವಿದ್ಯುತ್ ಶಾಕ್ ನೀಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಎಫ್ಪಿಪಿಸಿಎ ಶುಲ್ಕವನ್ನು ಯುನಿಟ್ಗೆ 50 ಪೈಸೆ ಬದಲಿಗೆ 1.15 ರು.ಗೆ ಹೆಚ್ಚಳ ಮಾಡಿ ಆದೇಶ ಮಾಡಿದೆ.ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಈ ಶುಲ್ಕ ಹೆಚ್ಚಳದಿಂದ ಯಾವುದೇ ಹೊರೆಯಾಗುವುದಿಲ್ಲ. ಆದರೆ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಲ್ಲದ ಬಳಕೆ ದಾರರು ಹಾಗೂ ವಾಣಿಜ್ಯ ಬಳಕೆದಾರರಿಗೆ ವಿದ್ಯುತ್ ದರ ಹೆಚ್ಚಳದ ಬಿಸಿ ತಟ್ಟಲಿದೆ.
ಸೆಪ್ಟೆಂಬರ್ ತಿಂಗಳ ಬಳಕೆಯ ವಿದ್ಯುತ್ ಶುಲ್ಕದ ಜತೆಗೆ ಒಟ್ಟು 115 ಪೈಸೆ (1.15 ರು.) ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ಶುಲ್ಕ ಸಂಗ್ರ ಹಿಸುವುದಾಗಿ ತಿಳಿಸಿದೆ. ಈ ಆದೇಶವು ಸೆಪ್ಟೆಂಬರ್ ವಿದ್ಯುತ್ ಬಿಲ್ ಗೆ ಸೀಮಿತವಾಗಲಿದೆಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ರಾಜ್ಯದ ಜನತೆಗೆ ಕರೆಂಟ್ ಶಾಕ್ ಎದುರಾಗಿದ್ದು, ಮತ್ತೆ ವಿದ್ಯುತ್ ದರ ಹೆಚ್ಚಳ ಆಗಿದೆ.