ಬೆಂಗಳೂರು : ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಶಾಕ್ , ಟೊಮೆಟೊ ಬಳಿಕ ಇದೀಗ ಈರುಳ್ಳಿ ಬೆಲೆಯೂ ಏರಿಕೆಯಾಗುತ್ತಿದೆ.
ಮಳೆಯಿಂದಾಗಿ ಈರುಳ್ಳಿ ಬೆಳೆ ನಷ್ಟವಾಗಿದ್ದು, ಜೊತೆಗೆ ಪೂರೈಕೆಯ ಕೊರತೆಯಿಂದಾಗಿ ಈರುಳ್ಳಿ ಬೆಲೆಯೂ ಭಾರೀ ಏರಿಕೆಯಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ದಪ್ಪ ಈರುಳ್ಳಿ ಬೆಲೆ 50 ಕೆ.ಜಿ ಚೀಲಕ್ಕೆ 1,200 ರೂ.ನಿಂದ 1,400 ರೂ.ರವರೆಗೆ ಇದೆ. ಸಣ್ಣ ಈರುಳ್ಳಿಗೆ 900 ರೂ.ರಿಂದ 1,100 ರೂ.ವರೆಗೆ ಇದೆ.ಈ ಮೂಲಕ ಟೊಮೆಟೊ ಬಳಿಕ ಈರುಳಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುವಂತಾಗಿದೆ.
ದೇಶಾದ್ಯಂತ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ನಷ್ಟವಾಗಿದೆ. ಹೀಗಾಗಿ ಈರುಳ್ಳಿ ಬೆಳೆ ಕಡಿಮೆ ಇರುವುದರಿಂದ ಪೂರೈಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆಯಾಗುತ್ತಿದೆ.