ಭಾರತೀಯರು ಇಡೀ ಜಗತ್ತನ್ನೇ ಆಳುತ್ತಿದ್ದಾರೆ ಅಂದರೂ ಅತಿಶಯೋಕ್ತಿಯೇನಲ್ಲ. ಯಾಕಂದ್ರೆ ಅಮೆರಿಕ, ರಷ್ಯಾ, ಬ್ರಿಟನ್ ಹೀಗೆ ಹಲವು ದೇಶಗಳಲ್ಲಿ ಭಾರತೀಯ ಮೂಲದ ನಾಯಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಹಲವು ದೇಶಗಳಲ್ಲಿ ಭಾರತೀಯ ಮೂಲಕ ಈ ನಾಯಕರು ರಾಜಕೀಯದ ಉತ್ತುಂಗದಲ್ಲಿ ಕುಳಿತು ದೇಶವನ್ನು ಮುನ್ನಡೆಸುತ್ತಿದ್ದಾರೆ. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ರಿಂದ ಹಿಡಿದು ಬ್ರಿಟನ್ ಪ್ರಧಾನಿ ರಿಷಿ ಸುನಕ್‌ವರೆಗೆ ಅನೇಕ ದೇಶಗಳಲ್ಲಿ ಭಾರತೀಯ ಮೂಲದ ಪ್ರತಿಭೆ ಬೆಳಗುತ್ತಿದೆ.
ಅಮೆರಿಕದ ಮುಂದಿನ ಅಧ್ಯಕ್ಷರ ರೇಸ್‌ನಲ್ಲಿ ಅನೇಕ ಭಾರತೀಯ ಮೂಲದ ನಾಯಕರೂ ಇದ್ದಾರೆ. ಏಷ್ಯಾದಿಂದ ಅಮೆರಿಕದವರೆಗೆ ಇಡೀ ವಿಶ್ವವು ಭಾರತೀಯ ನಾಯಕರ ಸಾಮರ್ಥ್ಯವನ್ನು ಶ್ಲಾಘಿಸುತ್ತಿದೆ.
ಸೆಶೆಲ್ಸ್ ಅಧ್ಯಕ್ಷ : ಈ ದೇಶದ ಅಧ್ಯಕ್ಷ ವೇವೆಲ್ ರಾಮ್‌ಕಲವನ್ ಮೂಲತಃ ಭಾರತೀಯರು. ಬಿಹಾರದಲ್ಲಿ ಅವರ ಕುಟುಂಬಸ್ಥರಿದ್ದರು. ಅವರ ಅಜ್ಜ ಗೋಪಾಲಗಂಜ್‌ನಲ್ಲಿ ವಾಸಿಸುತ್ತಿದ್ದರು.
ಪೋರ್ಚುಗಲ್ ಪ್ರಧಾನಿ : ಪೋರ್ಚುಗಲ್‌ನ ಪ್ರಧಾನ ಮಂತ್ರಿ ಆಂಟೋನಿಯೊ ಕೋಸ್ಟಾ ಅವರ ಮೂಲ ಕೂಡ ಭಾರತವೇ. ಅವರ ಅಜ್ಜ ಲೂಯಿಸ್ ಅಫೊನ್ಸೊ ಮಾರಿಯಾ ಡಿ ಕೋಸ್ಟಾ ಅವರು ಭಾರತದ ಗೋವಾ ನಿವಾಸಿಯಾಗಿದ್ದರು.
ಅವರ ಸಂಬಂಧಿಕರು ಗೋವಾದ ಮಾರ್ಗಾವೊ ಬಳಿಯ ಅಬೇದ್ ಫರಿಯಾದಲ್ಲಿ ಇನ್ನೂ ವಾಸಿಸುತ್ತಿದ್ದಾರೆ. ಕೋಸ್ಟಾ ಭಾರತದ OCI ಕಾರ್ಡ್ ಅನ್ನು ಹೊಂದಿದ್ದಾರೆ. ಅಂದರೆ ಸಾಗರೋತ್ತರ ಭಾರತೀಯ ಕಾರ್ಡ್ ಅನ್ನು ಹೊಂದಿದ್ದಾರೆ. ಇದನ್ನು 2017 ರಲ್ಲಿ ಪ್ರಧಾನಿ ಮೋದಿ, ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ಬ್ರಿಟನ್ ಪ್ರಧಾನಿ : ಇನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಬಗ್ಗೆ ನಮಗೆಲ್ಲ ಗೊತ್ತಿದೆ. 12 ಮೇ 1980 ರಂದು ಸುನಕ್ ಅವರು ಯುಕೆಯ ಸೌತಾಂಪ್ಟನ್‌ನಲ್ಲಿ ಜನಿಸಿದರು. ರಿಷಿ ಸುನಕ್ ಅವರ ಅಜ್ಜಿ ಪಂಜಾಬ್ ಪ್ರಾಂತ್ಯದವರು. ಮೂವರು ಒಡಹುಟ್ಟಿದವರಲ್ಲಿ ರಿಷಿ ಹಿರಿಯ ಮಗ. ಅವರು ಹಿಂದೂ ಧರ್ಮದ ಸಂಪ್ರದಾಯಗಳನ್ನು ಅನುಸರಿಸುತ್ತಾರೆ.
ಮಾರಿಷಸ್ ಅಧ್ಯಕ್ಷ: ಮಾರಿಷಸ್ ಅಧ್ಯಕ್ಷ ಪೃಥ್ವಿರಾಜ್ ಸಿಂಗ್ ರೂಪನ್ ಅವರ ಮೂಲ ಕೂಡ ಭಾರತವೇ. ಬಿಹಾರ ಮತ್ತು ಉತ್ತರ ಪ್ರದೇಶದೊಂದಿಗೆ ಅವರು ನಂಟು ಹೊಂದಿದ್ದಾರೆ. ಅವರ ಪೂರ್ವಜರು ಗಯಾ ನಿವಾಸಿಗಳು. ಅವರು ಭಾರತಕ್ಕೆ ಬಂದಾಗಲೆಲ್ಲಾ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.
ಸಿಂಗಾಪುರದ ಅಧ್ಯಕ್ಷೆ : ಇನ್ನು ಸಿಂಗಾಪುರದ ಅಧ್ಯಕ್ಷೆ ಹಲೀಮಾ ಯಾಕೋಬ್ ವಿಶ್ವದ ಅತ್ಯಂತ ಪ್ರಭಾವಿ ಮುಸ್ಲಿಮ್ ನಾಯಕಿ. ಟಾಪ್ 50ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ತಂದೆ ಭಾರತೀಯ ಮೂಲದವರು. ಅವರು ಮಹಿಳಾ ವಿಮೋಚನೆ ಮತ್ತು ದೇಶದ ಕಲ್ಯಾಣಕ್ಕೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಮಾಡಿದ್ದಾರೆ.
ಸುರಿನಾಮ್ ಅಧ್ಯಕ್ಷೆ ಚಂದ್ರಿಕಾ ಪ್ರಸಾದ್ ಸಂತೋಖಿ : ವಿದೇಶದಲ್ಲಿ ಉನ್ನತ ಸ್ಥಾನಕ್ಕೇರುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿರುವವರಲ್ಲಿ ಸುರಿನಾಮ್ ಅಧ್ಯಕ್ಷೆ ಚಂದ್ರಿಕಾ ಪ್ರಸಾದ್ ಸಂತೋಖಿ ಕೂಡ ಒಬ್ಬರು. ಇವರೂ ಭಾರತೀಯ ಮೂಲದವರು. 2022 ರಲ್ಲಿ ಸುರಿನಾಮ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ : ಗಯಾನಾದ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಕೂಡ ಭಾರತೀಯ ಮೂಲದವರು. 2020 ಅಲ್ಲಿನ ಅಧ್ಯಕ್ಷ ಪದವಿಗೇರಿದ್ದಾರೆ.