HomeKarnatakaBIG NEWS: ಚಲಿಸುತ್ತಿದ್ದ ಬಸ್ ನಿಂದ ಬಿದ್ದು ಕಂಡಕ್ಟರ್ ದುರ್ಮರಣ; ಸಂಚಾರಿ ಪೊಲೀಸರ ಕಣ್ಣೆದುರೇ ನಡೆದ...

BIG NEWS: ಚಲಿಸುತ್ತಿದ್ದ ಬಸ್ ನಿಂದ ಬಿದ್ದು ಕಂಡಕ್ಟರ್ ದುರ್ಮರಣ; ಸಂಚಾರಿ ಪೊಲೀಸರ ಕಣ್ಣೆದುರೇ ನಡೆದ ದುರಂತ…!

ಮಂಗಳೂರು: ಚಲಿಸುತ್ತಿದ್ದ ಬಸ್ ನಿಂದ ಬಿದ್ದು ಬಸ್ ನಿರ್ವಾಹಕರೇ ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ನಂತೂರು ವೃತ್ತದಲ್ಲಿ ನಡೆದಿದೆ.

23 ವರ್ಷದ ಈರಯ್ಯ ಮೃತ ಕಂಡಕ್ಟರ್. ಬಾಗಲಕೋಟೆ ಮೂಲದ ಈರಯ್ಯ ಸೂರತ್ಕಲ್ ನ ತಡಂಬೈಲ್ ನಲ್ಲಿ ವಾಸವಾಗಿದ್ದರು. ಚಲಿಸುತ್ತಿದ್ದ ಬಸ್ ನ ಫುಟ್ ಬೋರ್ಡ್ ಮೇಲೆ ನಿಂತಿದ್ದ ಕಂಡಕ್ಟರ್, ಬಸ್ ಟರ್ನಿಂಗ್ ವೇಳೆ ಆಯತಪ್ಪಿ ರಸ್ತೆ ಮೇಲೆ ಬಿದ್ದು ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುರತ್ಕಲ್ ನಿಂದ ಮಂಗಳೂರು ಕಡೆಗೆ ಬಸ್ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಬಸ್ ನ ಮುಂಭಾಗದ ಬಾಗಿಲಿನಲ್ಲಿ ಕಂಡಕ್ಟರ್ ಈರಯ್ಯ ನಿಂತಿದ್ದರು. ನಂತೂರು ವೃತ್ತದಲ್ಲಿ ಬಸ್ ತಿರುವು ಪಡೆಯುವ ರಭಸಕ್ಕೆ ಕೈ ಜಾರಿ ಈರಯ್ಯ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ಈರಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

ಕದ್ರಿ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular