HomeEntertainmentಆಗಸ್ಟ್ 30 ಕ್ಕೆ ʼಲವ್ʼ ಚಿತ್ರದ ಟ್ರೈಲರ್ ರಿಲೀಸ್

ಆಗಸ್ಟ್ 30 ಕ್ಕೆ ʼಲವ್ʼ ಚಿತ್ರದ ಟ್ರೈಲರ್ ರಿಲೀಸ್

ಇತ್ತೀಚೆಗೆ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿರುವ ‘ಲವ್’ ಚಿತ್ರದ ಟ್ರೈಲರ್ ಇದೇ ಆಗಸ್ಟ್ 30ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಮಹೇಶ್ ಅಮ್ಮಲ್ಲಿ ದೊಡ್ಡಿ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಜಯ್ ಜಯರಾಮ್ ಮತ್ತು ರುಷಾ ಪಾಟೀಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಶ್ರೀ ಕಾಲಭೈರವ ಮೂವಿ ಮೇಕರ್ಸ್ ಬ್ಯಾನರ್ ನಡಿ ದಿವಾಕರ್ ಎಸ್ ನಿರ್ಮಾಣ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿದ್ದಾರ್ಥ್ ಸಿಎಚ್ ಛಾಯಾಗ್ರಾಹಣವಿದ್ದು, ಸಾಯಿ ಶ್ರೀ ಕಿರಣ್ ಸಂಗೀತ ಸಂಯೋಜನೆ ನೀಡಿದ್ದಾರೆ. ಸೆಪ್ಟೆಂಬರ್ 15ಕ್ಕೆ ಈ ಚಿತ್ರ ರಾಜ್ಯದ್ಯಂತ ತೆರೆಕಾಣಲಿದೆ.

For Latest News Updates, Join Our Whatsapp Community🚩
RELATED ARTICLES

Most Popular