
ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಆಟೋ ಚಾಲಕ ಜೈಲಿನ ಗೋಡೆ ಜಿಗಿದು ತಪ್ಪಿಸಿಕೊಂಡು ಪರಾರಿಯಾಗಿದ್ದ. ಇದೀಗ ಆರೋಪಿಯನ್ನು ಬಂಧಿಸಿರುವ ದಾವಣಗೆರೆ ಪೊಲೀಸರು ಮತ್ತೆ ಆತನನ್ನು ಜೈಲಿಗೆ ಕಳುಹಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ದಗ್ಗಾವತಿ ಬಳಿ ಆರೋಪಿ ಆಟೋ ಚಾಲಕ ವಸಂತ್ ನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ದಾವಣಗೆರೆ ಉಪಕಾರಾಗ್ರಹದ ಗೋಡೆ ಜಿಗಿದು ಆರೋಪಿ ಪರಾರಿಯಾಗಿದ್ದ. ಕಾಲಿಗೆ ಪೆಟ್ಟಾಗಿದ್ದರೂ ಕುಂಟುತ್ತಾ ಓಡಿ ತಪ್ಪಿಸಿಕೊಂಡಿದ್ದ.
ಆಟೋ ಚಾಲಕ ವಸಂತ್ ವಿರುದ್ಧ ದಾವಣಗೆರೆ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬಂಧಿಸಿ ಆತನನ್ನು ಜೈಲಿಗೆ ಕಳುಹಿಸಲಾಗಿತ್ತು. ಆದರೆ ಎರಡೇ ದಿನಗಳಲ್ಲಿ ಆರೋಪಿ ವಸಂತ್ ಜೈಲಿನಿಂದ ಪರಾರಿಯಾಗಿದ್ದ.
ಕಾನ್ಸ್ ಟೇಬಲ್ ನಿಜಲಿಂಗಪ್ಪ ಖಚಿತ ಮಾಹಿತಿ ಆದರಿಸಿ, ದಗ್ಗಾವತಿಯಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ವಂಸಂತ್ ನನ್ನು ಪೊಲೀಸರು ಬಂಧಿಸಿದ್ದಾರೆ.

 
		 
		 
		 
		 Loading ...
 Loading ... 
		 
		 
		