alex Certify ಬಿರುಗಾಳಿಯನ್ನೂ ಮೀರಿಸುವಂತಿದೆ MG ಹೆಕ್ಟರ್‌ನ ಹೊಸ ಎಲೆಕ್ಟ್ರಿಕ್‌ ಕಾರು, ಒಮ್ಮೆ ಚಾರ್ಜ್‌ ಮಾಡಿದ್ರೆ ಚಲಿಸುತ್ತೆ 570 ಕಿಮೀ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿರುಗಾಳಿಯನ್ನೂ ಮೀರಿಸುವಂತಿದೆ MG ಹೆಕ್ಟರ್‌ನ ಹೊಸ ಎಲೆಕ್ಟ್ರಿಕ್‌ ಕಾರು, ಒಮ್ಮೆ ಚಾರ್ಜ್‌ ಮಾಡಿದ್ರೆ ಚಲಿಸುತ್ತೆ 570 ಕಿಮೀ….!

MG ಸೈಬರ್‌ಸ್ಟರ್ ಎಲೆಕ್ಟ್ರಿಕಲ್‌ ಕಾರು ಮತ್ತೆ ಸುದ್ದಿಯಲ್ಲಿದೆ. ಈ ಪರಿಕಲ್ಪನೆಯನ್ನು 2021ರಲ್ಲೇ ಅನಾವರಣಗೊಳಿಸಲಾಯಿತು. ಇದೊಂದು ಶುದ್ಧ ಎಲೆಕ್ಟ್ರಿಕ್ ರೋಡ್‌ಸ್ಟರ್, ವರ್ಷದ ಆರಂಭದಲ್ಲಿ ನಡೆದ ‘ಗುಡ್‌ವುಡ್ ಫೆಸ್ಟಿವಲ್ ಆಫ್ ಸ್ಪೀಡ್’ ನಲ್ಲಿ ನಿರ್ಮಾಣ ಆವೃತ್ತಿಯನ್ನು ಪ್ರದರ್ಶಿಸಲಾಗಿತ್ತು. ಇದೀಗ ಎಂಜಿ ಹೆಕ್ಟರ್‌ ಕಂಪನಿ ಎಲೆಕ್ಟ್ರಿಕ್ ರೋಡ್‌ಸ್ಟರ್‌ನ ವಿಶೇಷತೆಗಳನ್ನು  ಬಹಿರಂಗಪಡಿಸಿದೆ. ಮುಂದಿನ ವರ್ಷ ಈ ಕಾರಿನ ಮಾರಾಟ ಪ್ರಾರಂಭವಾಗುವ ನಿರೀಕ್ಷೆಯಿದೆ.

ಎಂಜಿ ಎಲೆಕ್ಟ್ರಿಕ್ ರೋಡ್‌ಸ್ಟರ್ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಬರಲಿದೆ. ಇದರಲ್ಲಿ ಎಲ್ಲಾ ಚಕ್ರಗಳಿಗೂ ಪವರ್‌ ಹೋಗುತ್ತದೆ. ಈ ಸೆಟಪ್ 528 Bhp ಗರಿಷ್ಠ ಪವರ್‌  ಮತ್ತು 725 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಿಶೇಷ ಅಂದ್ರೆ ಈ ಕಾರು 3.2 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಹೆಚ್ಚಿಸಿಕೊಳ್ಳಬಲ್ಲದು. MG ಸೈಬರ್‌ಸ್ಟರ್ 77 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಹೊಂದಿದೆ. ಒಮ್ಮೆ ಚಾರ್ಜ್‌ ಮಾಡಿದ್ರೆ ಈ ಕಾರು 570 ಕಿಮೀ ಚಲಿಸಬಲ್ಲದು.

ಈ ಓಪನ್ ಟಾಪ್ ಸ್ಪೋರ್ಟ್ಸ್ ಕಾರ್ 1,984 ಕೆಜಿ ತೂಕವಿದೆ. ಸೈಬರ್‌ಸ್ಟರ್ ಕಾರಿನ ಉದ್ದ, ಅಗಲ ಮತ್ತು ಎತ್ತರ ಕೂಡ ಗ್ರಾಹಕರನ್ನು ದಂಗುಬಡಿಸುವಂತಿದೆ.  MG ಸೈಬರ್‌ಸ್ಟರ್ 2,689 mm ವ್ಹೀಲ್‌ಬೇಸ್‌ನೊಂದಿಗೆ ಬರಲಿದೆ. MG ಸೈಬರ್‌ಸ್ಟರ್‌ನ ಹಗುರವಾದ ಆವೃತ್ತಿಯ ಹಿಂಬದಿ-ಚಕ್ರ ಡ್ರೈವ್ ಕಾನ್ಫಿಗರೇಶನ್‌ನಲ್ಲಿ ಬರುತ್ತದೆ.  ಸೈಬರ್‌ಸ್ಟರ್‌ನ RWD ರೂಪಾಂತರವು ಒಂದೇ ಚಾರ್ಜ್‌ನಲ್ಲಿ 519 ಕಿಮೀ ವ್ಯಾಪ್ತಿ ಹೊಂದಿರಲಿದೆ. ಇದು 4-ಪಿಸ್ಟನ್ ಸ್ಥಿರ ಕ್ಯಾಲಿಪರ್‌ಗಳೊಂದಿಗೆ ಬ್ರೆಂಬೊ ಬ್ರೇಕ್‌ಗಳನ್ನು ಮತ್ತು ಹೆಚ್ಚು ಕಠಿಣವಾದ ರೋಲ್‌ಬಾರ್ ಅನ್ನು ಹೊಂದಿದೆ. ಬಾಸ್‌ ಆಡಿಯೋ ಸಿಸ್ಟಮ್ ಮತ್ತು ಕ್ವಾಲ್ಕಾಮ್ ಸ್ನಾಸ್‌ಡ್ರಾಗನ್‌ 8155 ಚಿಪ್-ಚಾಲಿತ ಟಚ್‌ಸ್ಕ್ರೀನ್‌ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೂಡ ಈ ಕಾರಿನ ವಿಶೇಷತೆಗಳಲ್ಲೊಂದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...