HomeIndiaಪ್ರಸಾದ ಕೊಡುವ ನೆಪದಲ್ಲಿ ಮನೆಗೆ ಬಂದ ಕಂಡಕ್ಟರ್; ಪರಿಚಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್ ಮೇಲ್;...

ಪ್ರಸಾದ ಕೊಡುವ ನೆಪದಲ್ಲಿ ಮನೆಗೆ ಬಂದ ಕಂಡಕ್ಟರ್; ಪರಿಚಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್ ಮೇಲ್; ಆರೋಪಿ ಅರೆಸ್ಟ್


ನವದೆಹಲಿ: ಪರಿಚಿತ ಮಹಿಳೆಯ ಮೇಲೆ ಬಸ್ ಕಂಡಕ್ಟರ್ ಓರ್ವ ಅತ್ಯಾಚಾರವೆಸಗಿರುವ ಘೋರ ಘಟನೆ ದೆಹಲಿಯಲ್ಲಿ ನಡೆದಿದೆ.

ಪ್ರಸಾದ ಕೊಡುವ ನೆಪದಲ್ಲಿ ಮನೆಗೆ ಬಂದ ಬಸ್ ಕಂಡಕ್ಟರ್, ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಫೋಟೋ, ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

2010ರಿಂದ 17ರವರೆಗೆ ಮಹಿಳೆ ಡಿಟಿಸಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಮಗುವಾದ ಬಳಿಕ ಕೆಲಸವನ್ನು ಬಿಟ್ಟಿದ್ದರು. ಮಹಿಳೆಗೆ ಡಿಟಿಸಿಯಲ್ಲಿ ಕೆಲಸಕ್ಕೆ ಸೇರಲು ಸಹಾಯ ಮಾಡಿದ್ದ ಕಂಡಕ್ಟರ್ ನೇ ಈ ಕೃತ್ಯವೆಸಗಿದ್ದಾನೆ. ಹಳೆ ಪರಿಚಯ ಹಾಗೂ ದೇವರ ಪ್ರಸಾದ ಕೊಡುವ ನೆಪದಲ್ಲಿ ಮಹಿಳೆಯ ಮನೆಗೆ ಬಂದ ಆರೋಪಿಗೆ ಮಹಿಳೆ ತಂಪು ಪಾನೀಯ ನೀಡಿದ್ದರು. ಕೆಲ ದಾಖಲೆಗಳನ್ನು ತರಲು ರೂಮಿಗೆ ಹೋಗಿದ್ದರು. ಆಕೆ ಬರುವಷ್ಟರಲ್ಲಿ ತಂಪು ಪಾನೀಯ ಹಾಗೂ ಪ್ರಸಾದಕ್ಕೆ ಪ್ರಜ್ಞೆ ತಪ್ಪುವ ಪುಡಿಯನ್ನು ಬೆರೆಸಿ ಕೊಟ್ಟಿದ್ದಾನೆ. ಬಳಿಕ ಮಹಿಳೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃತ್ಯದ ಬಳಿಕ ಮಹಿಳೆಗೆ ಫೋಟೋ, ವಿಡಿಯೋ ಮೂಲಕ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿ ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular