ಬೆಂಗಳೂರು : ‘ಚಂದ್ರಯಾನ-3’ ಸಕ್ಸಸ್ ಬೆನ್ನಲ್ಲೇ ನಟ ಚೇತನ್ ವಿವಾದಾತ್ಮಕ ಟ್ವೀಟ್ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.ಚಂದ್ರಯಾನ-3 ಯಶಸ್ಸಿನ ಕೀರ್ತಿ/ಗುರುತು ಯಾರಿಗೆ ಸಲ್ಲುತ್ತದೆ, ನಮ್ಮ ವಿಜ್ಞಾನಿಗಳಿಗೋ ಅಥವಾ ‘ಲಾರ್ಡ್’ ತಿರುಪತಿಗೋ ಎಂದು ನಟ ಚೇತನ್ ಟ್ವೀಟ್ ಮಾಡಿದ್ದಾರೆ.
ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ—ಈ ಯಶಸ್ಸಿನ ಕೀರ್ತಿ/ಗುರುತು ಯಾರಿಗೆ ಸಲ್ಲುತ್ತದೆ: ನಮ್ಮ ವಿಜ್ಞಾನಿಗಳಿಗೆ ಅಥವಾ ‘ಲಾರ್ಡ್’ ತಿರುಪತಿಗೆ? ಎಂದು ನಟ ಚೇತನ್ ಟ್ವೀಟ್ ಮಾಡಿದ್ದಾರೆ. ನಟ ಚೇತನ್ ಮಾಡಿರುವ ಈ ಟ್ವೀಟ್ ವ್ಯಾಪಕ ಟೀಕೆಗಳಿಗೆ ಕಾರಣವಾಗಿದೆ.
ಬುಧವಾರದಂದು ಭಾರತ ಚಂದ್ರಯಾನ – 3 ರ ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ಭಾರತ ಮಾತ್ರವಲ್ಲದೆ ವಿಶ್ವದ ಮೂಲೆ ಮೂಲೆಗಳಿಂದ ಅಭಿನಂದನೆಗಳ ಸುರಿಮಳೆಯೇ ಹರಿದು ಬಂದಿದೆ. ಅಮೆರಿಕಾ, ರಷ್ಯಾ, ಚೀನಾ ಬಳಿಕ ಈಗ ಭಾರತದ ಇಸ್ರೋ ವಿಜ್ಞಾನಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದು, ಇಡೀ ವಿಶ್ವವೇ ಈಗ ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.
ನಿಜವಾಯ್ತು ‘ಚಂದ್ರಯಾನ-3’ ಸಕ್ಸಸ್ ಬಗ್ಗೆ ‘ಕೋಡಿಮಠದ ಶ್ರೀ’ ನುಡಿದಿದ್ದ ಭವಿಷ್ಯ
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬುಧವಾರದಂದು ತನ್ನ ಚಂದ್ರಯಾನ -3 ಯಶಸ್ವಿಯಾಗಿ ಪೂರೈಸಿದ್ದು, ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ.ಚಂದ್ರಯಾನ-3’ ಸಕ್ಸಸ್ ಬಗ್ಗೆ ‘ಕೋಡಿಮಠದ ಶ್ರೀ’ ನುಡಿದಿದ್ದ ಭವಿಷ್ಯ ನಿಜವಾಗಿದೆ. ಭಾರತದ ಚಂದ್ರಯಾನ-3 ಮಿಷನ್ ಯಶಸ್ವಿಯಾಗುತ್ತೆಯಂದು ‘ಕೋಡಿಮಠದ ಶ್ರೀ’ ಗಳು ಭವಿಷ್ಯ ನುಡಿದಿದ್ದರು. ಇದೀಗ ‘ಕೋಡಿಮಠದ ಶ್ರೀ’ ನುಡಿದಿದ್ದ ಭವಿಷ್ಯ ನಿಜವಾಗಿದೆ.
ಅದೇ ರೀತಿ ಶ್ರಾವಣಮಾಸದ ಮಧ್ಯಂತರ ಭಾಗದಲ್ಲಿ ಭಾರೀ ಮಳೆಯಿಂದ ಜಲಪ್ರಳಯ, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸುತ್ತದೆ. ವಿಪರೀತ ಮಳೆಯಿಂದ ಎರಡು ದೇಶಗಳು ನಾಶ ಆಗುತ್ತದೆ. ಭಾರತದಲ್ಲಿ ಜಲಪ್ರಳಯ ಆಗುವ ಲಕ್ಷಣಗಳಿವೆ ಎಂದು ಹೇಳಿದ್ದಾರೆ.ಪ್ರಕೃತಿಯಲ್ಲಿ ವಿಷಾನಿಲ ಬೀಸುವ ಪ್ರಸಂಗವೂ ಇದ್ದು, ಜಾಗತಿಕ ಮಟ್ಟದಲ್ಲಿ ವಿಷಾನಿಲದ ಪರಿಣಾಮ ಭಾರತದ ಮೇಲೂ ಆಗಲಿದೆ. ಭೂಕಂಪನದಿಂದ ದೊಡ್ಡ ದೊಡ್ಡ ನಗರಗಳಿಗೆ ಅಪಾಯವಾಗಲಿದೆ. ಇದ್ದಕ್ಕಿದ್ದಂತೆ ಜನರ ಸಾವಾಗುವ ಆತಂಕವಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.