ಆಗಸ್ಟ್ 24ಕ್ಕೆ ‘ಲವ್’ ಚಿತ್ರದ ಟೀಸರ್ ರಿಲೀಸ್

Love: 'ಒಂಟಿ‌ ಅಲ್ಲ ನಾನೀಗ' ಅಂತಿದ್ದಾರೆ ಯುವ ಪ್ರತಿಭೆ ಪ್ರಜಯ್, kannada-love -movie-ready-to-release

ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ‘ಲವ್’ ಚಿತ್ರತಂಡ ಆಗಸ್ಟ್ 24 ರಂದು ಟೀಸರ್ ಬಿಡುಗಡೆ ಮಾಡುತ್ತಿದೆ. ಸಂಜೆ 4.05ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ರಿಲೀಸ್ ಆಗಲಿದೆ.

ಪ್ರಜಯ್ ಜಯರಾಮ್ ನಾಯಕನಾಗಿ ನಟಿಸಿರುವ ಈ ಸಿನಿಮಾ ತನ್ನ ಹಾಡುಗಳಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಕೊನೆಯ ಹಂತದ ಶೂಟಿಂಗ್ನಲ್ಲಿ ಚಿತ್ರತಂಡ ನಿರತವಾಗಿದೆ.

ಮಹೇಶ್ ಸಿ ಅಮ್ಮಳ್ಳಿದೊಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಜಯ್ ಜಯರಾಮ್ ಗೆ ಜೋಡಿಯಾಗಿ ವೃಷ ಪಾಟೀಲ್ ಅಭಿನಯಿಸಿದ್ದಾರೆ. ಶ್ರೀ ಕಾಲ ಭೈರವ ಮೂವಿ ಮೇಕರ್ಸ್ ಬ್ಯಾನರ್ ನಡಿ ದಿವಾಕರ್ ಎಸ್ ನಿರ್ಮಾಣ ಮಾಡಿರುವ ಈ ಸಿನಿಮಾಗೆ ರೋಷಿತ್ ವಿಜಯನ್ ಸಂಗೀತ ಸಂಯೋಜನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read