ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲಡಾಖ್ ಪ್ರವಾಸ ಸಾಕಷ್ಟು ಸುದ್ದಿ ಮಾಡಿದೆ. ಕಾಂಗ್ರೆಸ್‌ನ ಯುವರಾಜ ಅಲ್ಲಿ ಬೈಕ್ ಓಡಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ಅಲ್ಲಿ ರಾಹುಲ್ ಸವಾರಿ ಮಾಡಿರೋದು ಕೆಟಿಎಂ ಅಡ್ವೆಂಚರ್ 390 ಮೋಟಾರ್ ಸೈಕಲ್. ಬೈಕ್ ಸವಾರಿ ಸಂದರ್ಭದಲ್ಲಿ ಅವರು ಮೋಟಾರ್‌ಕ್ರಾಸ್ ಶೈಲಿಯ ಹೆಲ್ಮೆಟ್ ಕೂಡ ಧರಿಸಿದ್ದರು.
ರಾಹುಲ್ ಬಳಿ ಇರುವ ಕೆಟಿಎಂ 390 ಅಡ್ವೆಂಚರ್ ಬೈಕ್, ಅಲಾಯ್ ವೀಲ್ ಆವೃತ್ತಿಯಾಗಿದೆ. ಆದರೆ ಇದು ದೊಡ್ಡ ಆಫ್‌ರೋಡ್ ಟೈರ್‌ಗಳನ್ನು ಹೊಂದಿರೋದು ವಿಶೇಷ. KTM 390 ಬೈಕ್‌ನ ಆರಂಭಿಕ ಬೆಲೆ 2.81 ಲಕ್ಷ ರೂಪಾಯಿ. ಇದರಲ್ಲಿ ಟಾಪ್ ಮಾಡೆಲ್ ಬೈಕ್‌ಗೆ 3.61 ಲಕ್ಷ ರೂಪಾಯಿ ಇದೆ. ಇದು ನಾಲ್ಕು ರೂಪಾಂತರಗಳಲ್ಲಿ ಮಾರಾಟಕ್ಕೆ ಲಭ್ಯವಿದೆ – 390 ಡ್ಯೂಕ್, ಆರ್‌ಸಿ 390 ಮತ್ತು 390 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಎಕ್ಸ್. ಈ ನಾಲ್ಕೂ ಬೈಕ್‌ಗಳು ಸಾಕಷ್ಟು ವಿಶೇಷತೆಗಳನ್ನು ಹೊಂದಿವೆ.
390 ಡ್ಯೂಕ್ ನೇಕೆಡ್ ಬೈಕ್, ಆರ್ 390 ಸೂಪರ್‌ಸ್ಪೋರ್ಟ್ಸ್ ಬೈಕ್, 390 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಎಕ್ಸ್ ಆಫ್ ರೋಡ್ ಅಡ್ವೆಂಚರ್ ಬೈಕ್‌ಗಳಾಗಿವೆ.ಇನ್ನು ರಾಹುಲ್ ಬಳಿಯಿರುವ KTM ಅಡ್ವೆಂಚರ್ 390 ಬೈಕ್, 373 cc, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 43.5 Bhp ಪವರ್ ಮತ್ತು 37 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಕೂಡ ಹೊಂದಿದೆ. ಈ ಎಂಜಿನ್ ಅನ್ನು KTM ನ ಇತರ 390 ಮಾದರಿಗಳಲ್ಲಿಯೂ ಬಳಸಲಾಗುತ್ತದೆ.
KTM ಅಡ್ವೆಂಚರ್ 390 ಫೀಚರ್ಸ್
KTM ಅಡ್ವೆಂಚರ್ 390 ಸಾಹಸಿಗಳಿಗೆಂದೇ ವಿನ್ಯಾಸಗೊಳಿಸಲಾದ ಬೈಕ್. ಇದು ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಕಾರ್ನರ್ ಮಾಡುವ ಎಬಿಎಸ್, ಆಫ್-ರೋಡ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಕ್ವಿಕ್‌ಶಿಫ್ಟರ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ರೈಡ್ ಬೈ ವೈರ್ ತಂತ್ರಜ್ಞಾನವೂ ಇದರಲ್ಲಿ ಲಭ್ಯವಿದೆ.