ಶಿವಮೊಗ್ಗ : ನವೋದಯ ವಿದ್ಯಾಲಯ 6 ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಮಾಡಲಾಗಿದೆ.
ಜಿಲ್ಲೆಯ ಗಾಜನೂರಿನ ಜವಾಹರ ನವೋದಯ ವಿದ್ಯಾಲಯದ 2024-25 ನೇ ಸಾಲಿಗೆ ಆರನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ದಿ: 25-08-2023 ರವರೆಗೆ ವಿಸ್ತರಿಸಲಾಗಿದೆ. ಈಗಾಗಲೇ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ವೆಬ್ಸೈಟ್ https://navodaya.gov.in ಮೂಲಕ ಸಲ್ಲಿಸಬಹುದು ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
* ಪಶುವೈದ್ಯಕೀಯ ಮಹಾವಿದ್ಯಾಲಯ-ತಾಂತ್ರಿಕ ಕಾರ್ಯಾಗಾರ
ಶಿವಮೊಗ್ಗ : ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಅಡಿಯಲ್ಲಿ ‘ಮನುಷ್ಯ ಮತ್ತು ಸಾಕು/ಮುದ್ದು ಪ್ರಾಣಿಗಳ ನಡುವಿನ ಸಂಬಂಧಗಳಲ್ಲಿ ಸಾಮಾಜಿಕ-ಸಾಂಸ್ಕøತಿಕ ಮತ್ತು ಪರಿಸರದ ಅಂಶಗಳ ಕುರಿತು ಒಂದು ಅಧ್ಯಯನ’ ಎಂಬ ವಿಷಯ ಕುರಿತು ತಾಂತ್ರಿಕ ಕಾರ್ಯಾಗಾರವನ್ನು ಆ.21 ರ ಬೆಳಿಗ್ಗೆ 10 ರಿಂದ ಪ್ರಾಣಿತಳಿ ಅನುವಂಶೀಯತೆ ಮತ್ತು ತಳಿಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಸಿ.ವೀರಣ್ಣ ಉದ್ಘಾಟಿಸುವರು. ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಪ್ರೊ.ಕೆ.ಗಣೇಶ್ ಅಧ್ಯಕ್ಷತೆ ವಹಿಸುವರು. ಪಾಂಡಿಚೆರಿಯ ರಾಜೀವ್‍ಗಾಂಧಿ ಇನ್ಸ್ಟಿಟ್ಯೂಟ್ ಆಫ್ ವೆಟರ್ನರಿ ರೀಸರ್ಚ್‍ನ ಪ್ರೊ.ಡಾ.ಎಸ್.ರಾಮ್ ಕುಮಾರ್ ಮಾನವ ಸಾಕು ಪ್ರಾಣಿಗಳ ನಡುವಿನ ಸಂಬಂಧ ಕುರಿತು ವಿಶೇಷ ಉಪನ್ಯಾಸ ನೀಡುವರು.ಮಾನವ ಪ್ರಾಣಿಗಳ ಪರಸ್ಪರ ಕ್ರಿಯೆಗಳು-ಮಾನಸಿಕ ಸಾಮಾಜಿಕ ಆಯಾಮಗಳು ಕುರಿತು ಮನೋವೈದ್ಯೆ ಡಾ.ಕೆ.ಎಸ್.ಪವಿತ್ರ ತಾಂತ್ರಿಕ ಉಪನ್ಯಾಸ ನೀಡುವರು. ಸಾಕು ಪ್ರಾಣಿ-ಸಂಬಂಧಿತ ಪ್ರಾಣಿಜನ್ಯ ರೋಗಗಳಿಂದ ರಕ್ಷಿಸಿಕೊಳ್ಳುವ ಕ್ರಮಗಳು ಕುರಿತು ಗೋವಾದ ಮಿಷನ್ ರೇಬಿಸ್ ಪ್ರಾಜೆಕ್ಟ್ ಮ್ಯಾನೇಜರ್ ಕು.ಜೂಲಿ ಕಾರ್ಫಮಾಟ್ ಉಪನ್ಯಾಸ ನೀಡುವರು.
ಮಧ್ಯಾಹ್ನ ವೇಳೆಯಲ್ಲಿ ಮನಷ್ಯ ಮತ್ತು ಸಾಕು/ಮುದ್ದು ಪ್ರಾಣಿಗಳ ನಡುವಿನ ಸಂಬಂಧಗಳಲ್ಲಿ ಸಾಮಾಜಿಕ-ಸಾಂಸ್ಕøತಿಕ ಮತ್ತು ಪರಿಸರದ ಅಂಶಗಳ ಕುರಿತು ಒಂದು ಅಧ್ಯಯನ ಕುರಿತು ಗುಂಪು ಚರ್ಚೆ ಆಯೋಜಿಸಲಾಗಿದೆ.ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗೆ ಪ್ರಧಾನ ಸಂಶೋಧಕಿ ಡಾ.ಆರ್.ಜಯಶ್ರೀ, ಸಹ ಪ್ರಾಧ್ಯಾಪಕರು, ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದೆಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ತಿಳಿಸಿದ್ದಾರೆ.