alex Certify Shocking Video: ಮಹಿಳೆಗೆ ಡಿಕ್ಕಿ ಹೊಡೆದಿದ್ದಕ್ಕೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ; ರೈಲಿನಡಿ ಸಿಲುಕಿ ಮೃತಪಟ್ಟ ದುರ್ದೈವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking Video: ಮಹಿಳೆಗೆ ಡಿಕ್ಕಿ ಹೊಡೆದಿದ್ದಕ್ಕೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ; ರೈಲಿನಡಿ ಸಿಲುಕಿ ಮೃತಪಟ್ಟ ದುರ್ದೈವಿ

ಮುಂಬೈ: ವ್ಯಕ್ತಿಯೊಬ್ಬ ಡಿಕ್ಕಿ ಹೊಡೆದು ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ಮುಂಬೈನಲ್ಲಿ ನಡೆದಿದೆ. ಮಾತಿನಲ್ಲಿ ನಡೆದ ಜಗಳ ಕೊನೆಗೆ ದುರಂತವಾಗಿ ಮಾರ್ಪಟ್ಟಿದೆ.

ಇಲ್ಲಿನ ಸಿಯಾನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಕಪಾಳಮೋಕ್ಷ ಮಾಡಿಸಿಕೊಂಡ ವ್ಯಕ್ತಿಯೊಬ್ಬ ಲೋಕಲ್ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ರೈಲ್ವೆ ನಿಲ್ದಾಣದ ಅಂಚಿನಲ್ಲಿ ಆರೋಪಿಗಳು ಕಪಾಳಮೋಕ್ಷ ಮಾಡಿದ ನಂತರ ವ್ಯಕ್ತಿ ಸಮತೋಲನ ಕಳೆದುಕೊಂಡು ಟ್ರ್ಯಾಕ್ ಮೇಲೆ ಬಿದ್ದಿದ್ದಾನೆ. ಭಾನುವಾರ (ಆಗಸ್ಟ್ 13) ಈ ಘಟನೆ ನಡೆದಿದೆ. ವ್ಯಕ್ತಿಯ ಸಾವಿಗೆ ಕಾರಣವಾದ ಆರೋಪಿಗಳನ್ನು ದಾದರ್ ಸರ್ಕಾರಿ ರಿಸರ್ವ್ ಪೊಲಿಸ್ (ಜಿಆರ್‌ಪಿ) ಕ್ರೈಂ ಬ್ರಾಂಚ್ ಪಡೆ ಬಂಧಿಸಿದೆ.

ಏನಾಯ್ತು ಘಟನೆ?

ಆರೋಪಿಗಳಾದ ಶೀತಲ್ ಮಾನೆ (30) ಮತ್ತು ಆಕೆಯ ಪತಿ ಅವಿನಾಶ್ (35) ಭಾನುವಾರ ರಾತ್ರಿ 9:15 ರ ಸುಮಾರಿಗೆ ಮನ್‌ಖುರ್ದ್‌ಗೆ ತೆರಳಲು ಸಿಯಾನ್ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದರು. ಸಿಯಾನ್ ಪ್ಲಾಟ್‌ಫಾರ್ಮ್ ನಂಬರ್ ಒಂದರಲ್ಲಿದ್ದಾಗ, ವ್ಯಕ್ತಿಯೊಬ್ಬ ಶೀತಲ್ ಳನ್ನು ತಳ್ಳಿದ್ದಕ್ಕೆ ವಾಗ್ವಾದ ಶುರುವಾಯ್ತು. ಕೋಪಗೊಂಡ ಶೀತಲ್ ತನ್ನ ಛತ್ರಿಯಿಂದ ಆ ವ್ಯಕ್ತಿಯನ್ನು ಹೊಡೆಯುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ.

ಶೀತಲ್ ವಾಗ್ವಾದ ನಡೆಸುತ್ತಿರುವುದನ್ನು ನೋಡಿದ ಆಕೆಯ ಪತಿ ಅವಿನಾಶ್ ಯಾರೋ ಆಕೆಯೊಂದಿಗೆ ಜಗಳವಾಡುತ್ತಿರುವುದನ್ನು ಗಮನಿಸಿದ್ದಾನೆ. ಸಿಟ್ಟಿಗೆದ್ದ ಅವಿನಾಶ್ ವ್ಯಕ್ತಿಗೆ ಬಲವಾಗಿ ಏಟು ನೀಡಿದ್ದಾನೆ. ಏಟಿನ ರಭಸಕ್ಕೆ ಆ ವ್ಯಕ್ತಿ ರೈಲ್ವೆ ಹಳಿ ಮೇಲೆ ಬಿದ್ದಿದ್ದಾನೆ.

ಈ ವೇಳೆ ಲೋಕಲ್ ಟ್ರೈನ್ ಸಮೀಪಿಸಿದೆ. ಆ ವ್ಯಕ್ತಿ ಬೇಗನೆ ಎದ್ದು ಪ್ಲಾಟ್‌ಫಾರ್ಮ್ ಮೇಲೆ ಏರಲು ಸಾಧ್ಯವಾದಷ್ಟು ಪ್ರಯತ್ನಿಸಿದ್ದಾನೆ. ಆದರೆ, ಆ ವೇಳೆಗಾಗಲೇ ರೈಲು ಪ್ಲಾಟ್ ಫಾರ್ಮ್ ಗೆ ಪ್ರವೇಶಿಸಿದ ಕಾರಣ, ಆತ ರೈಲು ಮತ್ತು ಪ್ಲಾಟ್‌ಫಾರ್ಮ್ ಅಂತರದ ನಡುವೆ ಸಿಲುಕಿಕೊಂಡು ಪ್ರಾಣಬಿಟ್ಟಿದ್ದಾನೆ.

https://twitter.com/fpjindia/status/1692113391211700578?ref_src=twsrc%5Etfw%7Ctwcamp%5Etweetembed%7Ctwterm%5E1692113391211700578%7Ctwgr%5E4e425d91915a475d7f7e6008af77300b2e66d2b4%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Foncamerabestemployeecrushedundermumbailocaltrainaftermanslapshimduringaltercationatsionstation-newsid-n528659642

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Узнайте лайфхаки, которые облегчат вашу жизнь! Мы делимся секретами кулинарии, полезными советами для огородников и интересными статьями о здоровом образе жизни. Посетите наш сайт и получите массу полезной информации! Загадка для внимательных: за Пятисекундное испытание: поиск пяти звезд в океане цветов - сложная Сложная логическая задача: Поиск 5 Какие ошибки избегать в питании Загадка: кто такая Где положить сумку в Žavingas virtuvės patarimai, nuostabus žemės ūkio gudrybės ir naudingos straipsniai apie sodo darbus - visa tai ir daugiau rasite mūsų tinklalapyje! Pasimokykite naujų būdų pagerinti savo gyvenimą ir išmėginkite skanius receptus iš mūsų kulinarijos rubrikos. Atskleiskite paslaptis sveikos ir ekologiškos gyvensenos su mūsų patarimais ir idėjomis. Sveikas ir skanus gyvenimas jau laukia jūsų!