ಪದವಿ ಹಾಗೂ ತಾಂತ್ರಿಕ ಶಿಕ್ಷಣ ಪಡೆದು ನಿರುದ್ಯೋಗಿಗಳಾಗಿರುವ ಯುವಕ ಯುವತಿಯರಿಗೆ ವರ್ಕ್ ಫ್ರಮ್ ಹೋಂ ಆಸೆ ತೋರಿಸಿ ವಾಟ್ಸ್‍ಪ್ ಹಾಗೂ ಟೆಲಿಗ್ರಾಂ ಗ್ರೂಪ್‍ಗಳ ಮೂಲಕ ವಂಚನೆ ಮಾಡಿರುವ ಪ್ರಕರಣಗಳು ವರದಿಯಾಗುತ್ತಿವೆ.
ಆರಂಭದಲ್ಲಿ ಮನೆಯಿಂದಲೇ ಕೆಲಸ ಮಾಡಿ, ಸುಲಭವಾಗಿ ತಿಂಗಳಿಗೆ ಲಕ್ಷ ಲಕ್ಷ ಹಣವನ್ನು ಸಂಪಾದಿಸಬಹುದು ಎಂದು ನಿರುದ್ಯೋಗಿಗಳನ್ನು ನಂಬಿಸಿ, ಅವರಿಗೆ ಟಾಸ್ಕ್ ನೀಡಿ, ಸ್ವಲ್ಪ ಹಣವನ್ನು ಫೋನ್ ಪೇ ಮತ್ತು ಇತರೆ ವ್ಯಾಲೆಟ್‍ಗಳ ಮೂಲಕ ಪಾವತಿಸಿ, ಅವರ ನಂಬಿಕೆ ಗಳಿಸಿಕೊಂಡ ನಂತರ, ನೊಂದಣಿ ಶುಲ್ಕ ಕಮಿಷನ್ ಹಾಗೂ ಇತರೆ ಶುಲ್ಕದ ಹೆಸರಿನಲ್ಲಿ ಅವರಿಂದ ಹೆಚ್ಚಿನ ಹಣ ಪಡದು ವಂಚಿಸಲಾಗುತ್ತಿದೆ.
ಉದ್ಯೋಗದಾತ ಸಂಸ್ಥೆಗಳು ಉದ್ಯೋಗಿಗಳಿಂದ ಯಾವುದೇ ಹಣ ಪಡೆಯುವುದಿಲ್ಲ. ಇಂತಹ ಆಸೆ ಆಮಿಷಗಳಿಗೆ ಒಳಗಾಗದೇ ನಿರುದ್ಯೋಗ ಯುವಕ ಯುವತಿಯರು ಎಚ್ಚರಿಕೆ ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ತಿಳಿಸಿದ್ದಾರೆ.