ನೈಜೀರಿಯಾದ ಉತ್ತರ ಮಧ್ಯ ಪ್ರದೇಶದಲ್ಲಿ ಸಶಸ್ತ್ರ ಗುಂಪುಗಳು ಗುರುವಾರ ನೈಜೀರಿಯಾದ ಸೇನೆಯ ಮೇಲೆ ದಾಳಿ ನಡೆಸಿದ್ದು,ಈ ದಾಳಿಯಲ್ಲಿ 36 ಯೋಧರು ಹುತಾತ್ಮರಾಗಿದ್ದಾರೆ ಎಂದು ನೈಜೀರಿಯಾ ಸೇನೆ ಈ ಬಗ್ಗೆ ಮಾಹಿತಿ ನೀಡಿದೆ.
ವರದಿಯ ಪ್ರಕಾರ, ಈ ವಾರದ ಆರಂಭದಲ್ಲಿ ನೈಜರ್ ರಾಜ್ಯದ ಬುಶಿಶಿ ಜಿಲ್ಲೆಯಲ್ಲಿ ನಡೆದ ಘರ್ಷಣೆಯ ನಂತರ ಸಶಸ್ತ್ರ ಗುಂಪುಗಳು (ನೈಜೀರಿಯಾ ಸೇನೆಯ ಮೇಲೆ ಭಯೋತ್ಪಾದಕ ದಾಳಿ) ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿವೆ. ಈ ದಾಳಿಯಲ್ಲಿ ಕನಿಷ್ಠ 36 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ.
ರಕ್ಷಣಾ ವಕ್ತಾರ ಮೇಜರ್ ಜನರಲ್ ಎಡ್ವರ್ಡ್ ಬುಬಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸೈನಿಕರು ಸೋಮವಾರ ನೈಜರ್ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಭಯೋತ್ಪಾದಕರ ದಾಳಿ ನಡೆಸಿದವು ಎಂದು ಹೇಳಿದರು. ಗುಂಡಿನ ದಾಳಿಯಲ್ಲಿ ಮೂವರು ಅಧಿಕಾರಿಗಳು ಮತ್ತು 22 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಈ ವೇಳೆ 7 ಯೋಧರು ಗಾಯಗೊಂಡಿದ್ದರು. ದಾಳಿಯ ನಂತರ ಗಾಯಾಳುಗಳನ್ನು ಸ್ಥಳಾಂತರಿಸಲು ನೈಜೀರಿಯನ್ ವಾಯುಪಡೆಯ ಹೆಲಿಕಾಪ್ಟರ್ ಅನ್ನು ಕಳುಹಿಸಲಾಗಿದೆ, ಆದರೆ ಅದು ರಾಜ್ಯದ ಮತ್ತೊಂದು ಭಾಗದಲ್ಲಿ ಅಪಘಾತಕ್ಕೀಡಾಗಿದ್ದು, ಇನ್ನೂ 14 ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಬುಬಾ ಹೇಳಿದರು.