ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಒಂದೇ ಹೆಲ್ಪ್ ಲೈನ್ 1800 425 3553

ಬೆಂಗಳೂರು: ರೈತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಮಾರ್ಗದರ್ಶನ, ಸಲಹೆ, ಪರಿಹಾರ ಕಲ್ಪಿಸಲು ಕೃಷಿ ಇಲಾಖೆಯಿಂದ ಏಕೀಕೃತ ಹೆಲ್ಪ್ಲೈನ್ ಆರಂಭಿಸಲಾಗಿದೆ.

ಇದುವರೆಗೆ 8 ಪ್ರತ್ಯೇಕ ಸಂಖ್ಯೆಗಳು ಇದ್ದವು. ಇವುಗಳ ಬದಲಿಗೆ ಒಂದೇ ಸಹಾಯವಾಣಿ ಸಂಖ್ಯೆ 1800 425 3553 ಆರಂಭಿಸಲಾಗಿದೆ. ಶೇಷಾದ್ರಿ ರಸ್ತೆಯ ಕೃಷಿ ಆಯುಕ್ತಾಲಯದಲ್ಲಿ ನೂತನ ಕರೆ ಕೇಂದ್ರವನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಲೋಕಾರ್ಪಣೆ ಮಾಡಿದ್ದಾರೆ.

ರೈತರಿಗೆ ಸುಲಭವಾಗಿ ಮಾಹಿತಿ ದೊರೆಯಲು ಈ ಮಾಹಿತಿ ಮತ್ತು ತಂತ್ರಜ್ಞಾನ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಕೃಷಿ ಇಲಾಖೆ ಮುಂದಾಗಿದೆ. ರೈತರಿಗೆ ಸರ್ಕಾರದ ಯೋಜನೆಯ ದೊರಕಿಸಲು, ಲಾಭ, ಬೆಳೆ ಸಮೀಕ್ಷೆ ಮೊದಲಾದವುಗಳ ಪ್ರಯೋಜನ ಪಡೆಯಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read