ನವದೆಹಲಿ : ನಾಯಕರನ್ನು ಜೈಲಿಗೆ ಹಾಕುವುದು ಮತ್ತು ಎಫ್ಐಆರ್ ದಾಖಲಿಸುವುದು ಬಿಜೆಪಿಗೆ ಅಭ್ಯಾಸವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ “ನೀವು (ಬಿಜೆಪಿ) ನಾಯಕರನ್ನು ಸೋಲಿಸಿ ಜೈಲಿಗೆ ಕಳುಹಿಸಲು ಬಯಸುತ್ತೀರಿ. ಯಾರಾದರೂ ಭಾಷಣ ಮಾಡಿದರೆ ಅಥವಾ ಏನನ್ನಾದರೂ ಹೇಳಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ… ಬಿಜೆಪಿಯವರು ನಾಯಕರನ್ನು ಜೈಲಿಗೆ ಹಾಕುವ ಮತ್ತು ಎಫ್ಐಆರ್ ದಾಖಲಿಸುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಖರ್ಗೆ ವಾಗ್ಧಾಳಿ ನಡೆಸಿದರು.