alex Certify ಗಮನಿಸಿ : ಕ.ಕ.ರ.ಸಾ. ನಿಗಮದ ಸಿಬ್ಬಂದಿಗಳ ವರ್ಗಾವಣೆಗೆ ಆನ್ ಲೈನ್ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ಕ.ಕ.ರ.ಸಾ. ನಿಗಮದ ಸಿಬ್ಬಂದಿಗಳ ವರ್ಗಾವಣೆಗೆ ಆನ್ ಲೈನ್ ಅರ್ಜಿ ಆಹ್ವಾನ

ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯೊಳಗೆ ದರ್ಜೆ-3 ಮೇಲ್ವಿಚಾರಕೇತರ ಹಾಗೂ ದರ್ಜೆ-4 ರ ಸಿಬ್ಬಂದಿಗಳ ವರ್ಗಾವಣೆಗಾಗಿ 2023 ನೇ ಸಾಲಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ವರ್ಗಾವಣೆ ಚಟುವಟಿಕೆಗಳು (ವಿಭಾಗದ ಒಳಗೆ ಹಾಗೂ ಅಂತರ ವಿಭಾಗ) ವರ್ಗಾವಣೆ ಪ್ರಕ್ರಿಯೆಯ ವಿವರ ಇಂತಿದೆ. ನಿಗಮದ www.kkrtc.org ವೆಬ್ಸೈಟ್ದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 2023ರ ಆಗಸ್ಟ್ 12 ರಿಂದ ಆಗಸ್ಟ್ 31 ರವರೆಗೆ ಅವಕಾಶ ಇರುತ್ತದೆ.

ಸಂಬಂಧಿಸಿದ ವಿಭಾಗಮಟ್ಟದ ಸಿಬ್ಬಂದಿ ಶಾಖೆಯಿಂದ ಅರ್ಜಿಗಳನ್ನು ಪರಿಶೀಲಿಸಿ ಸರಿಯಾಗಿರುವ ಬಗ್ಗೆ ಹಾಗೂ ವ್ಯತ್ಯಾಸಗಳಿದ್ದಲ್ಲಿ ಸರಿಪಡಿಸಿ, ಅವಶ್ಯ ಸೇವಾ ವಿವರಗಳನ್ನು ಭರ್ತಿ ಮಾಡಲು 2023ರ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 11 ರವರೆಗೆ ಅವಕಾಶ ಇರುತ್ತದೆ.

ಗಣಕ ಇಲಾಖೆಯಿಂದ ವರ್ಗಾವಣೆಗೆ ಅರ್ಹರಿರುವ ಸಿಬ್ಬಂದಿಗಳ ಯೂನಿಟ್ವಾರು ಅರ್ಹತಾ ಪಟ್ಟಿಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲು 2023ರ ಸೆಪ್ಟೆಂಬರ್ 12 ರಿಂದ ಸೆಪ್ಟೆಂಬರ್ 14 ರವರೆಗೆ ಅವಕಾಶ ಇರುತ್ತದೆ.
ವೆಬ್ಸೈಟ್ನಲ್ಲಿ ಪ್ರಕಟಿಸಿದ ಅರ್ಹತಾ ಪಟ್ಟಿಗೆ ಅರ್ಜಿದಾರರು ಆಕ್ಷೇಪಣೆಗಳನ್ನು (ಇದ್ದಲ್ಲಿ) ಆಯಾ ಯೂನಿಟ್ ಮುಖ್ಯಸ್ಥರಿಗೆ ಸಲ್ಲಿಸಲು 2023ರ ಸೆಪ್ಟೆಂಬರ್ 15 ರಿಂದ 19 ರವರೆಗೆ ಅವಕಾಶ ಇರುತ್ತದೆ.

ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಸರಿಪಡಿಸಿದ ನಂತರ, ಅಂತರ ವಿಭಾಗ ವರ್ಗಾವಣಾ ಅರ್ಜಿಗಳೊಂದಿಗೆ ದೃಢೀಕೃತ ಪಟ್ಟಿಯನ್ನು ಆಯಾ ಇಲಾಖಾ ಮುಖ್ಯಸ್ಥರಿಗೆ ಹಾಗೂ ವಿಭಾಗದೊಳಗಿನ ವರ್ಗಾವಣಾ ಅರ್ಜಿಗಳೊಂದಿಗೆ ದೃಢೀಕೃತ ಪಟ್ಟಿಯನ್ನು ವಿಭಾಗದ ವರ್ಗಾವಣಾ ಸಮಿತಿಗೆ ಸಿಬ್ಬಂದಿ ಶಾಖೆಯಿಂದ ಸಲ್ಲಿಸಲು 2023ರ ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 22 ರವರೆಗೆ ಅವಕಾಶ ಇರುತ್ತದೆ.ಆಯಾ ವರ್ಗಾವಣಾ ಸಮಿತಿಗಳು ವರ್ಗಾವಣಾ ಆದೇಶಗಳನ್ನು ಹೊರಡಿಸಿ, ಕಡ್ಡಾಯವಾಗಿ ಅನುಸರಣಾ ವರದಿಯನ್ನು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು, ಕೇಂದ್ರ ಕಛೇರಿ ಕಲಬುರಗಿ ರವರಿಗೆ ಸಲ್ಲಿಸಲು 2023ರ ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 30 ರವರೆಗೆ ಅವಕಾಶ ಇರುತ್ತದೆ.ವರ್ಗಾವಣೆಗೊಂಡ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಲು 2023ರ ಅಕ್ಟೋಬರ್ 3 ರಿಂದ ಅಕ್ಟೋಬರ್ 15 ರವರೆಗೆ ಅವಕಾಶ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...