ಬೆಂಗಳೂರು: ಡಿಪ್ಲೋಮಾ ಪಾಸಾದವರಿಗೆ ಇಂಜಿನಿಯರಿಂಗ್ ಎರಡನೇ ವರ್ಷದ ವ್ಯಾಸಂಗಕ್ಕೆ ನೇರ ದಾಖಲಾತಿ ಕಲ್ಪಿಸಲು ನಡೆಸಲಾಗುವ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇನ್ನೂ ಮೂರು ದಿನ ಅವಕಾಶ ನೀಡಲಾಗಿದೆ.
ಆಗಸ್ಟ್ 17ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಡಿಪ್ಲೊಮಾ ಪಾಸಾದವರು ಆಗಸ್ಟ್ 15ರಂದು ರಾತ್ರಿ 11:59 ಗಂಟೆವರೆಗೆ ಆನ್ಲೈನ್ ನಲ್ಲಿ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್ಸೈಟ್ ಗಮನಿಸಬಹುದಾಗಿದೆ ಎಂದು ಹೇಳಲಾಗಿದೆ.