ನವದೆಹಲಿ : ಬಿಜೆಪಿ ನಾಯಕರು, ಬಿಜೆಪಿಗೆ ಮತ ಹಾಕುವವರು ರಾಕ್ಷಸರು ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾಯಕ ರಣದೀಪ್ ಸರ್ಜೆವಾಲಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹರಿಯಾಣದ ಕೈದಾಲ್ನಲ್ಲಿ ಭಾನುವಾರ ನಡೆದ ಜನಕ್ರೋಶ ಸಭೆಯಲ್ಲಿ ಮಾತನಾಡಿದ ಸುರ್ಜಿವಾಲಾ , ಬಿಜೆಪಿ, ಜೆಜೆಪಿ ನಾಯಕರು ಹಾಗೂ ಬಿಜೆಪಿಗೆ ಮತ ಹಾಕುವವರೂ ರಾಕ್ಷಸರು ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
‘ಬಿಜೆಪಿ ಮತ್ತು ಜೆಜೆಪಿಗೆ ಮತ ಹಾಕುವವರು ಮತ್ತು ಬಿಜೆಪಿ ಬೆಂಬಲಿಗರು ಅವರು ರಾಕ್ಷಸ ಸ್ವಭಾವದವರು. ನಾನು ಅವನನ್ನು ಇಂದು ಮಹಾಭಾರತದ ಈ ಭೂಮಿಯಿಂದ ಶಪಿಸುತ್ತೇನೆ. ಮಹಾಭಾರತ ನಡೆದ ಸ್ಥಳದಿಂದ ಇದನ್ನು ಹೇಳುತ್ತಿದ್ದೇನೆ, ಬಿಜೆಪಿ ಮತ್ತು ಬಿಜೆಪಿ ಬೆಂಬಲಿಗರಿಗೆ ಮತ ಹಾಕಿದವರು ರಾಕ್ಷಸರು ಎಂದು ಕರೆದಿದ್ದಾರೆ. ಸುರ್ಜೇವಾಲಾ ಅವರ ಈ ವಿಡಿಯೋ ವೈರಲ್ ಆಗುತ್ತಿದೆ.