ನವದೆಹಲಿ: ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸಬ್ ಇನ್ಸ್ಪೆಕ್ಟರ್ ನೇಮಕಾತಿ 2023 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹತ್ತಿರದಲ್ಲಿದೆ. ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) ಅಧಿಕೃತ ವೆಬ್ಸೈಟ್ ssc.nic.in ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಎಸ್ಎಸ್ಸಿ ದೆಹಲಿ ಪೊಲೀಸ್ ಬಿಡುಗಡೆ ಮಾಡಿದ ನೇಮಕಾತಿ ಅಧಿಸೂಚನೆಯ ಪ್ರಕಾರ, ಸಿಎಪಿಎಫ್ ಎಸ್ಐ ನೇಮಕಾತಿ 2023 ಅಧಿಸೂಚನೆಯ ಪ್ರಕಾರ, ಈ ನೇಮಕಾತಿ ಡ್ರೈವ್ ಮೂಲಕ ಒಟ್ಟು 1876 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮಹಿಳಾ ಅಭ್ಯರ್ಥಿಗಳು ಎಸ್ಐ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ನಲ್ಲಿ ಸರ್ಜಿ ಸಲ್ಲಿಸಲು ನಾಳೆ ಆಗಸ್ಟ್ 15, 2023 ಕೊನೆಯ ದಿನಾಂಕವಾಗಿದೆ.
ನೇಮಕಾತಿ ಪರೀಕ್ಷೆ ಯಾವಾಗ ನಡೆಯಲಿದೆ?
ಎಸ್ಎಸ್ಸಿ ದೆಹಲಿ ಪೊಲೀಸ್ ಮತ್ತು ಸಿಎಪಿಎಫ್ ಎಸ್ಐನ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಅಕ್ಟೋಬರ್ 2023 ರಲ್ಲಿ ನಿಗದಿಪಡಿಸಲಾಗಿದೆ ಮತ್ತು ವಿವರವಾದ ವೇಳಾಪಟ್ಟಿಯನ್ನು ನಂತರ ಬಿಡುಗಡೆ ಮಾಡಲಾಗುವುದು. ಆಯೋಗವು ಅರ್ಜಿದಾರರಿಗೆ ಆಗಸ್ಟ್ 16 ರಿಂದ 17, 2023 ರವರೆಗೆ ಅರ್ಜಿ ನಮೂನೆಯಲ್ಲಿ ತಿದ್ದುಪಡಿಗಳನ್ನು ಮಾಡಲು ಅವಕಾಶ ನೀಡುತ್ತದೆ.
ಈ ನೇಮಕಾತಿ ಡ್ರೈವ್ ಮೂಲಕ ಒಟ್ಟು 1876 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇವುಗಳಲ್ಲಿ 109 ಎಸ್ಐ ದೆಹಲಿ ಪೊಲೀಸ್-ಪುರುಷ, 53 ಎಸ್ಐ ದೆಹಲಿ ಪೊಲೀಸ್-ಮಹಿಳಾ ಹುದ್ದೆಗಳು ಮತ್ತು ಸಿಎಪಿಎಫ್ನಲ್ಲಿ ಅತಿ ಹೆಚ್ಚು 1714 ಎಸ್ಐ (ಜಿಡಿ) ಹುದ್ದೆಗಳು ಸೇರಿವೆ.
ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ
ಆಗಸ್ಟ್ 1ಕ್ಕೆ ಅನ್ವಯವಾಗುವಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 20 ರಿಂದ 25 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಿನಾಯಿತಿ ಅನ್ವಯಿಸುತ್ತದೆ. ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಬ್ಯಾಚುಲರ್ ಡಿಗ್ರಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು, ಆದರೆ ಅವರು ಕಟ್-ಆಫ್ ದಿನಾಂಕದಂದು (ಆಗಸ್ಟ್ 15) ಅಥವಾ ಅದಕ್ಕೂ ಮೊದಲು ಪದವಿ ಪಡೆದಿರಬೇಕು. ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.
ಅರ್ಜಿ ಶುಲ್ಕ
ಎಸ್ಎಸ್ಸಿ ದೆಹಲಿ ಪೊಲೀಸ್, ಸಿಎಪಿಎಫ್ ಎಸ್ಐ ನೇಮಕಾತಿ 2023 ರ ಅರ್ಜಿ ಶುಲ್ಕ 100 ರೂ. ಮೀಸಲಾತಿಗೆ ಅರ್ಹರಾದ ಮಹಿಳಾ ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಮತ್ತು ಮಾಜಿ ಸೈನಿಕರಿಗೆ (ಇಎಸ್ಎಂ) ಸೇರಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.
https://ssc.nic.in/SSCFileServer/PortalManagement/UploadedFiles/notice_CPO-SI-2023_22072023.pdf