HomeKarnatakaಅವನು ಅಶ್ವಥ್ ನಾರಾಯಣ ಅಲ್ಲ, ನವರಂಗಿ ನಾರಾಯಣ : DCM ಡಿ.ಕೆ ಶಿವಕುಮಾರ್ ಕಿಡಿ

ಅವನು ಅಶ್ವಥ್ ನಾರಾಯಣ ಅಲ್ಲ, ನವರಂಗಿ ನಾರಾಯಣ : DCM ಡಿ.ಕೆ ಶಿವಕುಮಾರ್ ಕಿಡಿ

ಬೆಂಗಳೂರು : ಅವನು ಅಶ್ವಥ್ ನಾರಾಯಣ ಅಲ್ಲ, ನವರಂಗಿ ನಾರಾಯಣ ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ತಮ್ಮ ವಿರುದ್ಧ ಬೆಂಗಳೂರು ಅಭಿವೃದ್ಧಿ ಸಚಿವ ಅಲ್ಲ, ಬೆಂಗಳೂರು ನಿರ್ನಾಮ ಸಚಿವ ಎಂದು ಆರೋಪ ಮಾಡಿರುವ ಅಶ್ವಥ್ ನಾರಾಯಣ್ ಹೇಳಿಕೆಗೆ ಡಿಸಿಎಂ ಡಿಕೆಶಿ ವಾಗ್ಧಾಳಿ ನಡೆಸಿದರು.

ಅಶ್ವಥ್ ನಾರಾಯಣ್ ಅಲ್ಲ ಅವರು, ನವರಂಗಿ ನಾರಾಯಣ. ರಾಮನಗರಕ್ಕೆ ಬಂದು ಕ್ಲೀನ್ ಮಾಡ್ತೀನಿ ಅಂತ ಅವರ ಪಕ್ಷ ಕ್ಲೀನ್ ಮಾಡಿ ಹೋದರು. ಅವರ ಇಲಾಖೆಯಲ್ಲಿ, ಬೆಂಗಳೂರು ನಗರದಲ್ಲಿ ಏನು ಮಾಡಿದ್ದಾರೆ ಎಂದು ನಮಗೆ ಗೊತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಆಗಲಿ ಎಲ್ಲಾ ಬಿಚ್ಚಿಡ್ತೀನಿ ಎಂದು ಹೇಳಿದರು.ಕಳ್ಳರನ್ನ ರಕ್ಷಣೆ ಮಾಡೋದ್ರಲ್ಲಿ ಅಶ್ವಥ್ ನಾರಾಯಣ್ ಅವರಿಗೆ ಡಾಕ್ಟರೇಟ್ ಕೊಡಬೇಕು,  ಅವರ ಇಲಾಖೆಯಲ್ಲಿ ಏನು ಮಾಡಿದ್ರು ಅಂತ ಇನ್ನೂ ತೆಗೆದಿಲ್ಲ. ಸ್ವಾತಂತ್ರ್ಯ ದಿನಾಚರಣೆ ಆಗಲಿ ಮಾತಾಡ್ತೀನಿ ಎಂದು ಡಿಕೆಶಿ ವಾಗ್ಧಾಳಿ ನಡೆಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular