
ಚಿಕ್ಕಮಗಳೂರು : ನನ್ನ ಜೀವನದಲ್ಲೇ ಒಮ್ಮೆಯೂ ಲಂಚ ತೆಗೆದುಕೊಂಡಿಲ್ಲ ಅಂತಾ ಡಿ.ಕೆ ಶಿವಕುಮಾರ್ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಸಿ.ಟಿ ರವಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರು ಒಮ್ಮೆಯೂ ಲಂಚ ತೆಗೆದುಕೊಂಡಿಲ್ಲ, ತಮ್ಮ ಸರ್ಕಾರ ಪ್ರಮಾಣಿಕ ಇದೆ ಎಂದು ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಸವಾಲ್ ಎಸೆದಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಲಂಚ ಕೇಳಿಲ್ಲ ಎಂದು ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡಲಿ ಎನ್ನುವುದು ನಮ್ಮ ಆರೋಪವಲ್ಲ. ಬಿಬಿಎಂಪಿ ಗುತ್ತಿಗೆದಾರರ ಸಂಘದ ಆರೋಪ. ಡಿ.ಕೆ. ಶಿವಕುಮಾರ್ ಗೆ ಅಜ್ಜಯ್ಯನ ಮಠದ ಬಗ್ಗೆ ಭಕ್ತಿ ಇರುವುದರಿಂದ ಅಲ್ಲಿಗೆ ಕರೆದಿದ್ದಾರೆ. ಡಿ.ಕೆ. ಶಿವಕುಮಾರ್ ತಪ್ಪು ಮಾಡದಿದ್ದರೆ ಹೋಗಿ ಆಣೆ ಮಾಡಲಿ ಎಂದು ಹೇಳಿದ್ದಾರೆ.