
ಇದೇ ತಿಂಗಳು ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ದಿನದಂದು ‘ಲವ್’ ಚಿತ್ರದ ಕಣ್ಮಣಿ ಎಂಬ ವಿಡಿಯೋ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
ಈ ಹಾಡಿನ ಲಿರಿಕಲ್ ವಿಡಿಯೋ ಈಗಾಗಲೇ ರಿಲೀಸ್ ಆಗಿದ್ದು, ರೋಶಿತ್ ವಿಜಯನ್ ಧ್ವನಿಯಾಗಿರುವ ಈ ಹಾಡಿಗೆ ನಿರ್ದೇಶಕ ಮಹೇಶ್ ಸೀ ಅಮ್ಮಲ್ಲಿದೊಡ್ಡಿ ಸಾಹಿತ್ಯ, ಹಾಗೂ ಗಾಯಕ ರೋಶಿತ್ ವಿಜಯನ್ ಅವರೇ ಸಂಗೀತ ನೀಡಿದ್ದಾರೆ
ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರಕ್ಕೆ ಮಹೇಶ್ ಸೀ ಅಮ್ಮಲ್ಲಿದೊಡ್ಡಿ ಆಕ್ಷನ್ ಕಟ್ ಹೇಳಿದ್ದು, ಪ್ರಜಯ್ ಜಯರಾಮ್ ಹಾಗೂ ರುಷ ಮುಖ್ಯ ಭೂಮಿಕೆಯಲ್ಲಿದ್ದಾರೆ. ದಿವಾಕರ್ ಎಸ್ ನಿರ್ಮಾಣ ಮಾಡಿರುವ ಈ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ತೆರೆ ಮೇಲೆ ತರಲು ಚಿತ್ರಕಂಡ ಸಜ್ಜಾಗಿದೆ.
