
ನವದೆಹಲಿ: ರೋಗಿಗಳ ನೆರವಿಗೆ ಧಾವಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗ ಜೆನೆರಿಕ್ ಔಷಧ ಬರೆಯದಿದ್ದರೆ ವೈದ್ಯರಿಗೆ ದಂಡ ವಿಧಿಸಲಾಗುವುದು. ಲೈಸೆನ್ಸ್ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಔಷಧ ಖರೀದಿಗೆ ರೋಗಿಗಳು ಹೆಚ್ಚಿನ ಹಣ ವ್ಯಯ ಮಾಡುತ್ತಿರುವುದನ್ನು ತಪ್ಪಿಸಲು ದೇಶದ ವೈದ್ಯರು ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕು. ಅನಗತ್ಯವಾಗಿ ಔಷಧಗಳನ್ನು ಸೂಚಿಸಬಾರದು ಎಂದು ಎನ್ಎಂಸಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಂದು ವೇಳೆ ಜೆನೆರಿಕ್ ಔಷಧದ ಬದಲಿಗೆ ಬ್ರಾಂಡೆಡ್ ಔಷಧಗಳನ್ನು ವೈದ್ಯರು ಸೂಚಿಸಿದಲ್ಲಿ ಅಂತಹ ವೈದ್ಯರ ವಿರುದ್ಧ ದಂಡ ಹಾಗೂ ನಿರ್ದಿಷ್ಟ ಅವಧಿಗೆ ಲೈಸೆನ್ಸ್ ಅಮಾನತಗೊಳಿಸುವ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಆಗಸ್ಟ್ 2ರಂದು ವೈದ್ಯರ ಸೇವಾ ನಡತೆ ನಿಯಮಾವಳಿ ಪ್ರಕಟಿಸಿದ್ದು, ಈ ಅಂಶಗಳನ್ನು ಸೇರಿಸಲಾಗಿದೆ. 2002ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಬಿಡುಗಡೆ ಮಾಡಿದ್ದ ನಿಯಮದಲ್ಲಿ ದಂಡದ ಪ್ರಸ್ತಾಪ ಇರಲಿಲ್ಲ. ವೈದ್ಯರು ರೋಗಿಗಳಿಗೆ ಜೆನೆರಿಕ್ ಔಷಧಗಳನ್ನು ಶಿಫಾರಸು ಮಾಡಬೇಕು ಎಂಬ ನಿಯಮ ಇದೆ. ಈಗ ವೈದ್ಯಕೀಯ ಆಯೋಗ ಜೆನೆರಿಕ್ ಔಷಧ ಬರೆಯದಿದ್ದರೆ ವೈದ್ಯರಿಗೆ ದಂಡ, ಲೈಸೆನ್ಸ್ ಅಮಾನತು ಶಿಕ್ಷೆ ನೀಡುವ ಎಚ್ಚರಿಕೆ ನೀಡಿದೆ.