ಧಾರವಾಡ : ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಗೆ ಒಳಪಡುವ ಅನುದಾನ ರಹಿತ ಶಾಲೆಗಳಾದ ಹಳ್ಳಿಗೇರಿಯ ಪದ್ಮರಾಜ ಪ್ರಾಥಮಿಕ (1 ರಿಂದ 8) ಶಾಲೆ, ಗರಗ ಗ್ರಾಮದ ಗರಗ ವಿದ್ಯಾಮಂದಿರ (1 ರಿಂದ 5) ಶಾಲೆ, ಉಪ್ಪಿನ ಬೆಟಗೇರಿ ಗ್ರಾಮದ ಕಲ್ಪವೃಕ್ಷ ಪ್ರಾಥಮಿಕ (1 ರಿಂದ 5) ಶಾಲೆ ಮತ್ತು ಮನಸೂರಿನ ಇಕ್ರಾ ಉರ್ದು ಪ್ರಾಥಮಿಕ (1 ರಿಂದ 5) ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಧಾರವಾಡ ಗ್ರಾಮೀಣ ಬಿಇಓ ಅವರು, ಈ 4 ನಾಲ್ಕು ಶಾಲೆಗಳನ್ನು ಕರ್ನಾಟಕ ಶಿಕ್ಷಣ ಅಧಿನಿಯಮ 1983 (1995 ರ ಕರ್ನಾಟಕ ಅಧಿನಿಯಮ-1) ರ ಸೆಕ್ಷೆನ್ 39 (2) ರಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಧಿಸೂಚನೆ ಪತ್ರ ದಿ: 14-07-2023 ರಂತೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. ಸದರಿ ಶಾಲೆಗಳಲ್ಲಿ ಪಾಲಕರು ಮತ್ತು ಪೋಷಕರು ತಮ್ಮ ವಿದ್ಯಾರ್ಥಿಗಳನ್ನು ದಾಖಲು ಮಾಡಬಾರದೆಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.