ಜುಲೈ 2023 ಅನ್ನು ಇದುವರೆಗೆ ದಾಖಲಾದ ಅತ್ಯಂತ ಶಾಖದ ತಿಂಗಳು ಎಂದು ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ದೃಢಪಡಿಸಿದೆ. ಇದು ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ.
2023 ಪ್ರಸ್ತುತ ದಾಖಲೆಯ ಮೂರನೇ ಶಾಖದ ವರ್ಷವಾಗಿದೆ ಎಂದು ಕೋಪರ್ನಿಕಸ್ನ ಉಪನಿರ್ದೇಶಕರಾದ ಸಮಂತಾ ಬರ್ಗೆಸ್ ಹೇಳಿದ್ದಾರೆ. ಜುಲೈನಲ್ಲಿ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ.
ಜುಲೈನಲ್ಲಿ ಜಾಗತಿಕ ಗಾಳಿಯ ಉಷ್ಣತೆ ಮತ್ತು ಜಾಗತಿಕ ಸಮುದ್ರದ ಮೇಲ್ಮೈ ತಾಪಮಾನವು ಹೊಸ ಸಾರ್ವಕಾಲಿಕ ದಾಖಲೆಗಳನ್ನು ಸ್ಥಾಪಿಸಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮಹತ್ವಾಕಾಂಕ್ಷೆಯ ಪ್ರಯತ್ನಗಳ ತುರ್ತು ಅಗತ್ಯವಿದೆ ಎಂದು ಅವರು ಒತ್ತಿಹೇಳಿದ್ರು.
ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯಿಂದ ವಾಯುವ್ಯ ಚೀನಾದ ಟೌನ್ಶಿಪ್ವರೆಗೆ ದಾಖಲಾದ ತಾಪಮಾನದೊಂದಿಗೆ ಬಿಸಿಲಿನ ಶಾಖವು ಜಾಗತಿಕ ಪರಿಣಾಮವನ್ನು ಬೀರಿದೆ. ಕೆನಡಾ ಮತ್ತು ದಕ್ಷಿಣ ಯುರೋಪ್ನಲ್ಲಿ ಕಾಡ್ಗಿಚ್ಚುಗಳು ಉಲ್ಬಣಗೊಂಡಿವೆ. ಇದು ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ.