ಮಹೇಶ್ ಬಾಬು ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದು ದೇಶದಲ್ಲೆಡೆ ಅವರ ಅಭಿಮಾನಿಗಳು ಹಬ್ಬವನ್ನೇ ಮಾಡಿದ್ದಾರೆ. ಬಾಲ ನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿದ್ದ ಮಹೇಶ್ ಬಾಬು ಇಂದು ಟಾಲಿವುಡ್ ಪ್ರಿನ್ಸ್ ಎಂದೆ ಖ್ಯಾತಿ ಪಡೆದಿದ್ದಾರೆ.
ಮಹೇಶ್ ಬಾಬು 1999 ರಲ್ಲಿ ತೆರೆ ಕಂಡ ಕೆ ರಾಘವೇಂದ್ರ ರಾವ್ ನಿರ್ದೇಶನದ ‘ರಾಜಕುಮಾರುಡು’ ಚಿತ್ರದಲ್ಲಿ ಪ್ರಥಮ ಬಾರಿ ನಾಯಕನಾಗಿ ಕಾಣಿಸಿಕೊಂಡರು. ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡ ಮಹೇಶ್ ಬಾಬು ಒಂದರ ಮೇಲೊಂದು ಹಿಟ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಟಾಲಿವುಡ್ ನ ಸೂಪರ್ ಸ್ಟಾರ್ ಆದರು.
ಕಳೆದ ವರ್ಷ ತೆರೆ ಕಂಡಿದ್ದ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ನಟ ಮಹೇಶ್ ಬಾಬು ಹುಟ್ಟುಹಬ್ಬದ ಪ್ರಯುಕ್ತ ‘ಬಿಜಿನೆಸ್ ಮ್ಯಾನ್’ ಸಿನಿಮಾವನ್ನು ಇಂದು ಮರು ಬಿಡುಗಡೆ ಮಾಡಲಾಗಿದ್ದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.