ಕಳೆದ ಎರಡು ವರ್ಷಗಳಿಂದ ಡಯಾಬಿಟಿಸ್ ಕಾಯಿಲೆ ಶೇ.20-30ರಷ್ಟು ಹೆಚ್ಚಾಗಿದೆ…… ಬಿಪಿ ಅಥವಾ ಅಧಿಕ ರಕ್ತದೊತ್ತಡ ಶೇ. 30-40ರಷ್ಟು ಹೆಚ್ಚಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ‘ಹೃದಯಾಘಾತ’ ಕಳೆದ ಎರಡು ವರ್ಷಗಳಿಂದ ಶೇ.10 ರಷ್ಟು ಜಾಸ್ತಿಯಾಗಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಚಿಕ್ಕಮಕ್ಕಳು, 18 ವರ್ಷದವರಿಂದ ಹಿಡಿದು 40 ವರ್ಷದವರೆಗಿನವರಲ್ಲಿ ಆರೋಗ್ಯವಾಗಿರುವವರಲ್ಲಿಯೂ ಹೃದಯಾಘಾತ ಸಂಭವಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ರೀತಿಯ ಹೃದಯಾಘಾತಕ್ಕೆ ಕಾರಣವೇನು ? ಈಗಿನ ಜನರ ಲೈಫ್ ಸ್ಟೈಲ್…? ಅನೇಕರು ಹೇಳುವ ಪ್ರಕಾರ ಇಂದಿನ ಜನರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು. ವೆಸ್ಟರ್ನ್ ಲೈಫ್ ಸ್ಟೈಲ್ ಫಾಲೋ ಮಾಡುತ್ತಿರುವುದು, ಅದರಲ್ಲಿಯೂ ಪ್ರಮುಖವಾಗಿ ‘ಕಿಟೋ ಡಯಟ್’ ನ್ನು ಹೆಚ್ಚಾಗಿ ಅನುಸರಿಸುತ್ತಿರುವುದು ಎಂಬ ಮಾತು ಕೇಳಿಬರುತ್ತಿದೆ. ಇದು ನಿಜವೇ? ಲೈಫ್ ಸ್ಟೈಲ್ ಬದಲಾವಣೆ ಅಥವಾ ಕಿಟೋ ಡಯಟ್ ನಿಂದ ಹೃದಯಾಘಾತವಾಗುತ್ತದೆಯೇ? ಎಂಬ ಪ್ರಶ್ನೆಗಳಿಗೆ ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
‘ಕಿಟೋ ಡಯಟ್’ ಎಂದರೇನು ? ಈ ಡಯಟ್ ನಲ್ಲಿ ಹೈ ಫ್ಯಾಟ್, ಪ್ರೋಟಿನ್ ಆಹಾರವನ್ನು ಕೊಡಲಾಗುತ್ತದೆ. ನಾವು ಸೇವಿಸುವ ಆಹಾರದಲ್ಲಿ ಕೊಬ್ಬಿನ ಅಂಶ, ಪ್ರೋಟಿನ್ ಜಾಸ್ತಿ ಮಾಡಲಾಗುತ್ತದೆ. ಕಾರ್ಬೊಹೈಡ್ರೇಟ್ ನ್ನು ಕಡಿಮೆ ಮಾಡುತ್ತಾರೆ. ಅಂದರೆ ಜಾಸ್ತಿ ಪ್ರಮಾಣದಲ್ಲಿ ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ, ಚೀಜ್, ಬಟರ್, ಚಿಕನ್, ಫಿಶ್ ನಂತಹ ಆಹಾರವನ್ನು ಉಪಯೋಗಿಸಲು ಹೇಳುತ್ತಾರೆ. ವೇಯ್ಟ್ ಲಾಸ್ ಮಾಡಿಸುವ ಉದ್ದೇಶದಿಂದ 2-3 ತಿಂಗಳು ಈ ರೀತಿ ಆಹಾರ ಪದ್ಧತಿಯನ್ನು ಕಿಟೋ ಡಯಟ್ ನಲ್ಲಿ ಹೇಳಲಾಗುತ್ತದೆ.
ಕಿಟೋ ಡಯಟ್ ಆಹಾರ ಪದ್ಧತಿಯಿಂದ ಹೃದಯಾಘಾತ ಸಂಭವಿಸುವುದಿಲ್ಲ. ಇದರಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು ಹೊರತು ಸಾವು ಸಂಭವಿಸಲ್ಲ. ಡಯಟ್ ಎನ್ನುವುದು ನಾವು ತಿನ್ನುವ ಆಹಾರ ಪದ್ಧತಿಯಲ್ಲಿ ಕೆಲ ಬದಲಾವಣೆ. ನಮ್ಮ ಆಹಾರ ಪದ್ಧತಿಯಲ್ಲಿ ಬ್ಯಾಲೆನ್ಸ್ಡ್ ಇದ್ದರೆ ಸಾಕು. ಹಸಿವಾದಾಗ ತಿನ್ನಬೇಕು ಆಹಾರದಲ್ಲಿ ಸಮತೋಲನ ಕಾಡಿಕೊಳ್ಳುವುದು ಮುಖ್ಯ. ಇನ್ನೊಂದು ವಿಚಾರವೆಂದರೆ ಕಿಟೋ ಡಯಟ್ ಮಾಡುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ ಇದನ್ನು ಫಾಲೋ ಮಾಡುವುದು ತಪ್ಪು. ಆದರೆ ಇದರಿಂದ ಹೃದಯಘಾತವಾಗುತ್ತದೆ ಎಂಬುದು ಶುದ್ಧ ಸುಳ್ಳು ಎಂದು ಡಾ. ರಾಜು ಸ್ಪಷ್ಟಪಡಿಸಿದ್ದಾರೆ.
ಹೃದಯಾಘಾತ ಶೇ.10 ರಷ್ಟು ಜಾಸ್ತಿಯಾಗಿರುವುದು ಕಳೆದ ಎರಡು ವರ್ಷಗಳಿಂದ. ಅಂದರೆ ಎರಡು ವರ್ಷಗಳ ಹಿಂದೆ ಕೋವಿಡ್ ಮಹಾಮಾರಿ ಆರಂಭವಾಯಿತು. ಇದಕ್ಕೆ ಯಾವುದೇ ಔಷಧವಿರಲಿಲ್ಲ ಆದರೂ ಅನಗತ್ಯ ಔಷಧಿಗಳನ್ನು ಜನರಿಗೆ ನೀಡಲಾಯಿತು. ಇಮ್ಯೂನಿಟಿ ಬೂಸ್ಟರ್ ಎಂದು ಕೆಲ ಕೆಮಿಕಲ್ ಯುಕ್ತ ಔಷಧಿ ಕೊಡಲಾಯಿತು. ರ್ಯಾಮ್ ಡಿಸಿವರ್, ವಿಟಮಿನ್ ಟ್ಯಾಬ್ಲೆಟ್, ಇಂಜಕ್ಷನ್ ಹೀಗೆ ನಮ್ಮ ದೇಹಕ್ಕೆ ಅಗತ್ಯವಿಲ್ಲದಷ್ಟು ಔಷಧಗಳನ್ನು ಕೊಡಲಾಯಿತು.
ಇದು ನಮ್ಮ ದೇಹದ ಅಂಗಾಂಗಗಳ ಮೇಲೆ ದುಷ್ಪರಿಣಾಮಗಳನ್ನು ಬೀರುವ ಸಾಧ್ಯತೆ ಹೆಚ್ಚು. ಕೋವಿಡ್ ನಿಂದ ಪ್ರತಿಯೊಬ್ಬರಲ್ಲಿ ಇನ್ಫೆಕ್ಷನ್ ಆದಾಗ ತಾನಾಗಿಯೇ ಆಂಟಿ ಬಾಡಿ ಉತ್ಪತ್ತಿಯಾಗುತ್ತದೆ. ಹೀಗಾಗಿ ಯಾವುದೇ ವ್ಯಾಕ್ಸಿನ್ ಅಗತ್ಯವಿರಲಿಲ್ಲ. ನಮ್ಮ ದೇಹಕ್ಕೆ ಬೇಡವಾದ ಕೆಮಿಕಲ್ ಔಷಧಿ ರೂಪದಲ್ಲಿ ಸೇರಿದಾಗ ಅದು ನಮ್ಮ ದೇಹದ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದರೆ ಇದರಿಂದಲೇ ಸಾವು ಸಂಭವಿಸುತ್ತೆ ಎಂದು ಹೇಳಲಾಗದು ಎಂದು ಡಾ. ರಾಜು ಅಭಿಪ್ರಾಯ ಪಟ್ಟಿದ್ದಾರೆ. ಹೀಗೆ ನಮ್ಮ ಕಿಡ್ನಿ, ಲಿವರ್, ಹೃದಯ ಯಾವುದೇ ಅಂಗಾಂಗಗಳ ಮೇಲೆ ಆಗಿರುವ ದುಷ್ಪರಿಣಾಮ, ಯಾವುದೇ ತೊಂದರೆಯನ್ನು ಸರಿಪಡಿಸಿಕೊಳ್ಳಲುಬಹುದು. ಅದು ಹೇಗೆ ಎಂಬುದನ್ನೂ ಈ ವಿಡಿಯೋದಲ್ಲಿ ಡಾ. ರಾಜು ತಿಳಿಸಿದ್ದಾರೆ.