![article-image](https://gumlet.assettype.com/freepressjournal/2023-08/09ea58e5-73df-4cb7-a8d7-ddba9803af35/Untitled_design___2023_08_07T164558_889.jpg)
ಪರದೆ ಮೇಲೆ ನೆಚ್ಚಿನ ನಟ-ನಟಿಯರು ಬಂದರೆ ಅಭಿಮಾನಿಗಳಿಗೆ ಆಗೋ ಖುಷಿ ಅಷ್ಟಿಷ್ಟಲ್ಲ. ಅದೇ ಅಭಿಮಾನಿಗಳು ಹುಚ್ಚೆದ್ದು ಕುಣಿದುಬಿಡುತ್ತಾರೆ. ಕೆಲವರಂತೂ ನಟ-ನಟಿಯರನ್ನೇ ದೇವರೆಂದು ಪೂಜಿಸ್ತಾರೆ ಕೂಡ. ಅದು ಅವರ ಹೃದಯದಲ್ಲಿದ್ದ ನಟರಿಗೆ ಕೊಟ್ಟ ಪ್ರೀತಿ ಹಾಗೂ ಅಭಿಮಾನ.
ಸ್ಕ್ರೀನ್ ಮೇಲೆ ನೋಡಿಯೇ ಇಷ್ಟು ಪ್ರೀತಿ ಕೊಡುವ ಈ ಅಭಿಮಾನಿಗಳು, ಅದೇ ನಟರು ಕಣ್ಣೆದುರು ಬಂದು ನಿಂತಾಗ ಅವರು ಖುಷಿಯಿಂದ ಆಡೋ ಹುಚ್ಚಾಟಗಳು ಒಂದೆರಡಲ್ಲ. ಇತ್ತೀಚೆಗೆ ನಟಿ ತಮನ್ನಾಗೂ ಅದೇ ರೀತಿಯ ಅನುಭವವಾಗಿದೆ. ಇಲ್ಲಿ ಅಭಿಮಾನಿಯೊಬ್ಬ ಬ್ಯಾರಿಕೇಡ್‌ನ್ನೇ ಹಾರಿ ನಟಿ ತಮನ್ನಾಗೆ ಜೊತೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಮನ್ನಾ ಭಾಟಿಯಾ ಇತ್ತೀಚೆಗೆ ಕೇರಳದ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅಲ್ಲಿ ನಟಿ ಸೀರೆಯೊಂದಿಗೆ ಟೆಂಪಲ್ ಜ್ಯುವೆಲ್ಲರಿ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಲುಕ್‌ನಲ್ಲಿ ನಟಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಆ ಕಾರ್ಯಕ್ರಮದಿಂದ ನಟಿ ಹೊರಬರುತ್ತಿದ್ದಂತೆಯೇ ಅಭಿಮಾನಿಯೊಬ್ಬರು ಬ್ಯಾರಿಕೇಡ್ ಮುರಿದು ಒಳ ನುಗ್ಗಿದ್ದಾರೆ. ತಮನ್ನಾ ಸುತ್ತಲೂ ಭದ್ರತಾ ಸಿಬ್ಬಂದಿಗಳು ಏನಾಗುತ್ತಿದೆ ಅಂದುಕೊಳ್ಳುವಷ್ಟರಲ್ಲೇ ಆ ಅಭಿಮಾನಿ ಮುಂದೆ ಬಂದು ತಮನ್ನಾ ಕೈ ಹಿಡಿದಿದ್ದ. ತಕ್ಷಣವೇ ಆತನನ್ನ ಭದ್ರತಾ ಸಿಬ್ಬಂದಿಗಳು ದೂರ ತಳ್ಳಿದ್ದರು.
ಆ ಸಮಯದಲ್ಲೂ ತಾಳ್ಮೆಯಿಂದ ನಡೆದುಕೊಂಡ ನಟಿ ತಮನ್ನಾ, ಅಭಿಮಾನಿಯ ಆಸೆಯಂತೆ ಆತನ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ತನ್ನ ನೆಚ್ಚಿನ ನಟಿ ಜೊತೆ ಫೋಟೋ ತೆಗೆಸಿಕೊಂಡೆ ಅನ್ನೊ ಖುಷಿಗೆ ಆ ಅಭಿಮಾನಿ ಇನ್ನಷ್ಟು ಥ್ರೀಲ್ ಆಗಿದ್ದಂತೂ ಸುಳ್ಳಲ್ಲ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವವರಲ್ಲಿ ನಟಿ ತಮನ್ನಾ ಭಾಟಿಯಾ ಕೂಡ ಒಬ್ಬರು. ಮಿಲ್ಕಿ ಬ್ಯೂಟಿ ಅಂತಾನೇ ಫೇಮಸ್ ಆಗಿರೋ ತಮನ್ನಾ, ಇತ್ತೀಚೆಗೆ ’ಜೈಲರ್’ ಸಿನೆಮಾದ ’ಕವಾಲಾ’ ಹಾಡಿಗೆ ಮಾಡಿರೋ ಡಾನ್ಸ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗ್ಹೋಗಿದ್ದಾರೆ.