ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಮುನಿಸಿಕೊಂಡು 80 ಅಡಿ ಎತ್ತರದ ವಿದ್ಯುತ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಛತ್ತೀಸ್ಗಡದಲ್ಲಿ ನಡೆದಿದೆ.
ಗೌರೆಲಾ ಪೆನ್ಡ್ರಾ ಮಾರುವಾಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಪ್ರಿಯತಮನ ಜೊತೆ ಈ ಯುವತಿ ಜಗಳವಾಡಿದ್ದಾಳೆ. ಕೋಪದ ಭರದಲ್ಲಿ ಆತ ಕೂಡ ಬೈದಿದ್ದು, ಇದರಿಂದ ಮುನಿಸಿಕೊಂಡ ಆಕೆ ಸರಸರನೇ ಹೈಟೆನ್ಷನ್ ವಿದ್ಯುತ್ ಟವರ್ ಏರಿದ್ದಾಳೆ.
ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕೆ ಬೆದರಿಕೆ ಹಾಕಿದ್ದು, ಯುವಕ ನನ್ನದು ತಪ್ಪಾಯಿತು ಕೆಳಗಿಳಿದು ಬಾ ಎಂದರೂ ಆಕೆ ಪಟ್ಟು ಸಡಿಲಿಸಿಲ್ಲ. ವಿಷಯ ಪೊಲೀಸಿನವರೆಗೂ ಮುಟ್ಟಿದ್ದು, ಅವರೂ ಕೂಡ ಆಗಮಿಸಿದ್ದಾರೆ. ಬಳಿಕ ಪರಿಪರಿಯಾಗಿ ಅಂಗಲಾಚಿದ ಯುವಕ ಕೊನೆಗೂ ಆಕೆಯ ಮನವೊಲಿಸಿ ಕೆಳಗಿಳಿಸಲು ಯಶಸ್ವಿಯಾಗಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://twitter.com/keshaboinasri/status/1688251263266476032?ref_src=twsrc%5Etfw%7Ctwcamp%5Etweetembed%7Ctwterm%5E1688251263266476032%7Ctwgr%5E66ef8a0169ececea95d1cb30040ca0439bcaeb38%7Ctwcon%5Es1_&ref_url=https%3A%2F%2Fhosakannada.com%2F2023%2F08%2F07%2Fraipur-news-video-viral-angry-at-boyfriend-girl-climbs-80-feet-high-transmission-tower%2F