HomeKarnatakaBIG UPDATE : ನಾಳೆ ರಾತ್ರಿ ಬೆಂಗಳೂರಿಗೆ ‘ಸ್ಪಂದನಾ’ ಮೃತದೇಹ ಆಗಮನ, ಬುಧವಾರ ಅಂತ್ಯಸಂಸ್ಕಾರ

BIG UPDATE : ನಾಳೆ ರಾತ್ರಿ ಬೆಂಗಳೂರಿಗೆ ‘ಸ್ಪಂದನಾ’ ಮೃತದೇಹ ಆಗಮನ, ಬುಧವಾರ ಅಂತ್ಯಸಂಸ್ಕಾರ

ಬೆಂಗಳೂರು : ಹೃದಯಾಘಾತದಿಂದ ಮೃತಪಟ್ಟಂತಹ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹ ನಾಳೆ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು, ಬುಧವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸ್ಪಂದನಾ ದೊಡ್ಡಪ್ಪ ಬಿ.ಕೆ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ. ಥೈಲ್ಯಾಂಡ್ ನಲ್ಲಿ ಸ್ಪಂದನಾ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆ ಕಾರ್ಯ ಮುಕ್ತಾಯಗೊಂಡಿದ್ದು, ನಾಳೆ ರಾತ್ರಿ ಬೆಂಗಳೂರಿಗೆ ಪಾರ್ಥೀವ ಶರೀರ ಆಗಮಿಸಲಿದೆ, ಇದಕ್ಕಾಗಿ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ., ಬುಧವಾರ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದ ನಟ, ನಿರೂಪಕ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಸಾವಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಥೈಲ್ಯಾಂಡ್ ಪ್ರವಾಸದಲ್ಲಿದ್ದ ಸ್ಪಂದನಾಗೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರುವ ಸಂಬಂಧ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular