ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಕೆಲ ತಿಂಗಳುಗಳಲ್ಲಿಯೇ ಭಕ್ತರ ಪ್ರವೇಶಕ್ಕೆ ತೆರೆದುಕೊಳ್ಳಲಿದೆ. ಈ ಒಂದು ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿರುವ ಮಧ್ಯೆ ಆಲಿಘಡದ ವೃದ್ಧ ದಂಪತಿ ವಿಶೇಷ ಉಡುಗೊರೆ ಒಂದನ್ನು ನೀಡಿದ್ದಾರೆ.
ರಾಮ ಭಕ್ತರಾದ ಸತ್ಯ ಪ್ರಕಾಶ್ ಶರ್ಮಾ ಹಾಗೂ ರುಕ್ಮಿಣಿ ದೇವಿ ದಂಪತಿ ಒಂದು ತಿಂಗಳುಗಳ ಕಾಲ ಶ್ರಮ ವಹಿಸಿ ಬರೋಬ್ಬರಿ 400 ಕೆಜಿ ತೂಕದ ಬೀಗ ತಯಾರಿಸಿದ್ದು, ಇದಕ್ಕಾಗಿ ತಮ್ಮ ಉಳಿತಾಯದ ಹಣ ಎರಡು ಲಕ್ಷ ರೂ. ಗಳನ್ನು ಬಳಸಿದ್ದಾರೆ.
ಈ ಬೀಗದ ಕೀಲಿ ಕೈ 30 ಕೆಜಿ ಭಾರವಿದ್ದು, ನಾಲ್ಕು ಅಡಿ ಉದ್ದವಿದೆ. ಇನ್ನು ಬೀಗ 10 ಅಡಿ ಎತ್ತರ, 4.5 ಅಡಿ ಅಗಲ ಹಾಗೂ 9.5 ಇಂಚು ದಪ್ಪವಿದೆ. ಇದು ಕೈನಿಂದ ತಯಾರಿಸಲಾದ ವಿಶ್ವದ ಅತಿ ದೊಡ್ಡ ಬೀಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.