
ಅದೃಷ್ಟ ಒಮ್ಮೆ ಕೈ ಹಿಡಿದ್ರೆ ಸಾಕು, ರಾತ್ರೋ ರಾತ್ರಿ ಹಣೆಬರಹವೇ ಏಕ್ದಂ ಬದಲಾಗಿರುತ್ತೆ. ಹಾಗಂತ ಅದು ಪ್ರತಿಯೊಬ್ಬರ ಕೈ ಹಿಡಿಯೋದಿಲ್ಲ. ಆದರೆ ಇತ್ತೀಚೆಗೆ ಅಮೆರಿಕಾದ ವ್ಯಕ್ತಿಯೊಬ್ಬರಿಗೆ ಅದೃಷ್ಟ ಪದೇ ಪದೇ ಕೈ ಹಿಡಿದಿದೆ. ಅದೇ ವ್ಯಕ್ತಿ ಅಮೆರಿಕದ ಮಿಲೆನಿಯರ್ಗಳಲ್ಲಿ ಒಬ್ಬನಾಗಿದ್ದಾನೆ.
ವಾಂಗ್ಚಾ ಅನ್ನೊ ಹೆಸರಿನ ವ್ಯಕ್ತಿ ಮದ್ಯದ ಅಂಗಡಿಯಲ್ಲಿ ಸ್ಕ್ವಾಚ್- ಆ, ಅನ್ನೊ ಲಾಟರಿಯೊಂದನ್ನ ಖರೀದಿ ಮಾಡಿದ್ದಾನೆ. ಅದೇ ಲಾಟರಿಯಿಂದಾಗಿ ಆತ ಬರೋಬ್ಬರಿ 1ಮಿಲಿಯನ್ ಡಾಲರ್ ಬಹುಮಾನವನ್ನ ಗೆದ್ದಿದ್ದ.
ಅಸಲಿಗೆ ವಾಂಗ್ಚಾ ಕ್ಯಾಲಿಫೊರ್ನಿಯದಲ್ಲಿ 30 ಡಾಲರ್ ಖರ್ಚು ಮಾಡಿ ಲಾಟರಿಯೊಂದನ್ನ ಕೊಂಡುಕೊಂಡಿದ್ದರು. ಆ ಲಾಟರಿಯಿಂದಾಗಿ ಅವರು 500 ಡಾಲರ್ ಗೆದ್ದಿದ್ದರು. ಆ ಹಣದಿಂದ ಅವರು ಲಾಟರಿಯ ಸಂಪೂರ್ಣ ಪುಸ್ತಕವನ್ನೇ ಖರೀದಿ ಮಾಡುತ್ತಾರೆ. ಅದರಲ್ಲಿ ಅವರು ಒಂದೊಂದಾಗಿ ಲಾಟರಿಗಳನ್ನ ಸ್ಕ್ರ್ಯಾಚ್ (ಗೀಚುವುದು) ಮಾಡುತ್ತಾರೆ. ಸುಮಾರು 20 ಟಿಕೆಟ್ ಸ್ಕ್ರ್ಯಾಚ್ ಮಾಡಿರ್ತಾರೆ ಅಷ್ಟೆ. ಆಗಲೇ ಅದರೊಳಗಿದ್ದ ಒಂದು ಲಾಟರಿ ಇವರ ಕಿಸ್ಮತ್ನ್ನೇ ಬದಲಾಯಿಸಿರುತ್ತೆ.
ಆ ಲಾಟರಿಗಳ ರಾಶಿಯಲ್ಲಿ ಒಂದು ಲಾಟರಿ ಬರೋಬ್ಬರಿ 1 ಮಿಲಿಯನ್ ಡಾಲರ್ ಗೆದ್ದಿರುತ್ತೆ. ವಾಂಗ್ಚಾ ಈಗ ಮಿಲಿಯರ್ ಆಗಿದ್ದಾರೆ. ಲಾಟರಿಯಿಂದಾಗಿ ಆಗರ್ಭ ಶ್ರೀಮಂತರಾಗಿರುವ ಇವರ ಖುಷಿಗೆ ಈಗ ಪಾರವೇ ಇಲ್ಲದಂತಾಗಿದೆ. ಅದರಲ್ಲೂ ಅದೃಷ್ಟ ಒಂದಲ್ಲ ಎರಡು ಬಾರಿ ಒಲಿದು ಬಂದಿದ್ದರಿಂದ ಇವರ ಖುಷಿಗೆ ಈಗ ಪಾರವೇ ಇಲ್ಲದಂತಾಗಿದೆ.